ಪಪ್ಪಾಯಿ ಹಣ್ಣು ರುಚಿಕರವಾಗಿದ್ದು, ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ.
ಪಪ್ಪಾಯಿ ಜೊತೆ ಈ ಆಹಾರಗಳನ್ನು ಸೇವಿಸುವುದರಿಂದ ಅದು ದೇಹಕ್ಕೆ ವಿಷಕಾರಿಯಾಗುತ್ತಂತೆ.
ಪಪ್ಪಾಯಿ ಹಣ್ಣನ್ನು ಸಲಾಡ್‌ಗೆ ಬಳಸುತ್ತಿದ್ದರೆ, ಅದಕ್ಕೆ ನಿಂಬೆರಸ ಸೇರದಂತೆ ನೋಡಿಕೊಳ್ಳಿ.
ನಿಂಬೆ ರಸ ಮತ್ತು ಪಪ್ಪಾಯಿ ಒಟ್ಟಿಗೆ ಸೇವಿಸಿದರೆ ವಿಷಕಾರಿಯಾಗುತ್ತದೆ.
ಇದು ರಕ್ತಹೀನತೆ, ಹಿಮೋಗ್ಲೋಬಿನ್ ಅಸಮತೋಲನಕ್ಕೆ ಕಾರಣವಾಗಬಹುದು.
ನಿಂಬೆಹಣ್ಣು ಹಾಗೂ ಪಪ್ಪಾಯಿ ಎರಡನ್ನೂ ಬೇರೆ ಬೇರೆ ಸಮಯದಲ್ಲಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ಅಲ್ಲದೆ ಪಪ್ಪಾಯಿಯನ್ನು ಗರ್ಭಿಣಿಯರು ಸೇವಿಸಬಾರದು.
ಇದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸಬಹುದು.
ಇದು ಪ್ರಸವಪೂರ್ವ ಹೆರಿಗೆಗೂ ಕಾರಣವಾಗಬಹುದು.
ಆದ ಕಾರಣ ಪ್ರಗ್ನೆನ್ಸಿ ಸಮಯದಲ್ಲಿ ಪಪ್ಪಾಯಿ ತಿನ್ನಬಾರದು.