ತಿಂದ ಆಹಾರವು ಅಜೀರ್ಣವಾಗುತ್ತಿದ್ದಲ್ಲಿ ಒಂದು ಲೋಟ ಪಪ್ಪಾಯಿ ಎಲೆಯ ರಸವನ್ನು ಜ್ಯೂಸ್ ರೂಪದಲ್ಲಿ ಸೇವಿಸಿ ಇದರಿಂದ ಜೀರ್ಣಕ್ರಿಯ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ.
ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಪ್ಪಾಯಿ ಎಲೆಯ ರಸವು ಆರೋಗ್ಯಕರವಾಗಿರುತ್ತದೆ.ಹಾಗೂ ಕರುಳಿನ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.
ಉರಿಯೂತ ಸಮಸ್ಯೆಯ ನಿವಾರಣೆಗಾಗಿ ಪಪ್ಪಾಯಿ ಎಲೆಯ ರಸವನ್ನು ಸೇವಿಸಿ.ಇದು ದೇಹಕ್ಕೆ ತಂಪಗಿನ ವಾತಾವರಣವನ್ನು ಕೊಡುತ್ತದೆ.
ಕೂದಲು ಉದುರುತ್ತಿದ್ದರೆ,ಅಥವಾ ಸರಿಯಾದ ಬೆಳವಣಿಗೆ ಇಲ್ಲದೇ ಇದ್ದಲ್ಲಿ ಪಪ್ಪಾಯಿ ಎಲೆಯು ಸಹಾಯಕ್ಕೆ ಬರುತ್ತದೆ.ನೆತ್ತಿಯ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.
ಪಪ್ಪಾಯಿ ಎಲೆಯಲ್ಲಿ ಫೈಬರ್ ಅಂಶಗಳು ಹೆಚ್ಚಾಗಿದ್ದೂ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ನ್ನು ಹೊರಹಾಕುವುದಲ್ಲದೇ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಧೂಳಿನಿಂದ ನಿಮ್ಮ ಮುಖದಮೇಲೆ ಮೊಡವೆಗಳು ಆವರಿಸಿಕೊಂಡಿದ್ದರೆ ಅಥವಾ ಕಲೆಗಳಿದ್ದರೆ ಅದನ್ನು ಹೋಗಲಾಡಿಸಲು ಪಪ್ಪಾಯಿ ಎಲೆಗಳು ಸೂಕ್ತವೆನಿಸುತ್ತದೆ.
ದೇಹದಲ್ಲಿ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಇದ್ದೂ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತಿದ್ದರೆ ಅದರ ವಿರುದ್ಧ ಹೋರಾಡಿ ಯಕೃತ್ತಿನ ಆರೋಗ್ಯವನ್ನು ಸುಧಾರಣೆ ಮಾಡುತ್ತದೆ.
ಪಪ್ಪಾಯಿ ಎಲೆಯ ರಸವು ಡೆಂಗ್ಯೂ ಜ್ವರವನ್ನು ಹೋಗಲಾಡಿಸುತ್ತದೆ.ದೇಹದಲ್ಲಿ ಪ್ಲೇಟ್‌ಲೆಟ್ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.