ಹಿಂದೂ ಧರ್ಮದಲ್ಲಿ ಹಾಗೂ ಆಯುರ್ವೇದದಲ್ಲಿ ಪಾರಿಜಾತ ಸಸ್ಯಕ್ಕೆ ವಿಶೇಷ ಮಹತ್ವವಿದೆ. ಈ ಔಷಧೀಯ ಸಸ್ಯದ ಎಲೆಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅಡಗಿವೆ. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೇವಿಸಿದರೆ ತುಂಬಾ ಪ್ರಯೋಜನಕಾರಿ.
ಶೀತ ಕೆಮ್ಮಿನಿಂದ ಪರಿಹಾರ ಪಡೆಯಲು ಪಾರಿಜಾತ ಸಸ್ಯದ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೇವಿಸಬೇಕು. ಈ ನೀರಿಗೆ ಜೇನುತುಪ್ಪ ಬೆರೆಸಿಯೂ ಕುಡಿಯಬಹುದು.
ಪಾರಿಜಾತದ ಎಲೆಯ ಜೊತೆಗೆ ತುಳಸಿ ಎಲೆಗಳನ್ನು ಹಾಕಿ ನೀರಿನಲ್ಲಿ ಕುದಿಸಿ ಆ ನೀರನ್ನು ಸೇವಿಸಬೇಕು. ಈ ನೀರನ್ನು ದಿನಕ್ಕೆ ಎರಡು ಬಾರಿ ಸೇವಿಸಬಹುದು.
ಮಂಡಿ ನೋವಿನಿಂದ ನೀವು ಬಳಲುತ್ತಿದ್ದರೆ ಪಾರಿಜಾತದ ಎಲೆಗಳನ್ನು ಕುದಿಸಿದ ನೀರನ್ನು ಸೇವಿಸಬೇಕು.
ಪಾರಿಜಾತದ ಎಲೆಯಲ್ಲಿರುವ ಆಂಟಿ ಅಸ್ತಮ್ಯಾಟಿಕ್ ಮತ್ತು ಆಂಟಿ ಅಲರ್ಜಿಕ್ ಗುಣಗಳಿಂದ ಅಸ್ತಮಾ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಪಾರಿಜಾತದ ಎಲೆಗಳನ್ನು ಕುದಿಸಿದ ನೀರನ್ನು ಸೇವಿಸುವುದರಿಂದ ದಿನವಿಡೀ ಎನರ್ಜಿ ಇರುತ್ತದೆ.
ಪಾರಿಜಾತದ ಎಲೆಗಳನ್ನು ಕುದಿಸಿದ ನೀರನ್ನು ಸೇವಿಸುವುದರಿಂದ ಸೋಂಕಿನಿಂದ ಪರಿಹಾರ ಸಿಗುತ್ತದೆ.
ಪಾರಿಜಾತದ ಎಲೆಗಳನ್ನು ಕುದಿಸಿದ ನೀರನ್ನು ಸೇವಿಸುವುದರಿಂದ ಬ್ಲೋಟಿಂಗ್ ನಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ