ಈ ಸಮಸ್ಯೆ ಇದ್ದರೆ ರಾಗಿ ತಿನ್ನಬಾರದು !

ರಾಗಿ ಪೋಷಕ ತತ್ವ

ಪೋಷಕಾಂಶಗಳ ಆಗರವಾಗಿರುವ ರಾಗಿ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಕೆಲವರು ಮಾತ್ರ ರಾಗಿಯನ್ನು ತಿನ್ನುವಂತಿಲ್ಲ.

ಅಜೀರ್ಣ

ರಾಗಿ ಉಷ್ಣ ಗುಣವನ್ನು ಹೊಂದಿರುತ್ತದೆ. ಯಾರಿಗೆ ಅಜೀರ್ಣ, ಗ್ಯಾಸ್ ಮುಂತಾದ ಸಮಸ್ಯೆ ಇರುವುದೋ ಅವರು ರಾಗಿ ಸೇವಿಸಬಾರದು.

ಕಿಡ್ನಿ ಸಮಸ್ಯೆ

ರಾಗಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟಿನ ಇರುತ್ತದೆ. ಇದು ಕಿಡ್ನಿ ಸಂಬಂಧಿತ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಥೈರಾಯಿಡ್ :

ಥೈರಾಯಿಡ್ ರೋಗಿಗಳು ರಾಗಿ ತಿನ್ನಬಾರದು. ಇಲ್ಲವಾದರೆ ಸಮಸ್ಯೆ ಹೆಚ್ಚಾಗುವ ಭಯ ಇರುತ್ತದೆ.

ಮಲಬದ್ದತೆ :

ಯಾರಿಗೆ ಮಲಬದ್ದತೆಯ ಸಮಸ್ಯೆ ಇರುವುದೋ ಅವರು ರಾಗಿ ಸೇವಿಸಬಾರದು. ರಾಗಿ ಮಲವನ್ನು ಮತ್ತಷ್ಟು ಬಿಗಿ ಮಾಡುತ್ತದೆ.

ಸೀಮಿತ ಪ್ರಮಾದಲ್ಲಿ ಸೇವಿಸಿ

ರಾಗಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಇಲ್ಲವಾದರೆ ಹೊಟ್ಟೆ ಉಬ್ಬರದ ಸಮಸ್ಯೆ ಕಾಡಬಹುದು.

ಪೋಷಕ ತತ್ವ

ನಿಮ್ಮ ಆರೋಗ್ಯ ಉತ್ತಮವಾಗಿದ್ದು ಅದನ್ನು ಹಾಗೆಯೇ ಕಾಪಾಡಿಕೊಳ್ಳಬೇಕಾದರೆ ರಾಗಿ ಸೇವಿಸಬೇಕು.

ನಿತ್ಯ ರಾಗಿಯನ್ನು ಸೇವಿಸುವುದಾದರೆ 80 ರಿಂದ 100 ಗ್ರಾಂರಾಗಿಯನ್ನು ಮಾತ್ರ ಸೇವಿಸಬೇಕು.

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story