ಅನಾನಸ್ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಅಡಗಿದೆ, ಇದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನೆಗಳಿವೆ.
ಆದರೆ, ಕೆಲವು ಆರೋಗ್ಯ ಸಮಸ್ಯೆ ಇರುವವರು ಈ ಅನಾನಸ್ ಹಣ್ಣನ್ನು ಸೇವಿಸಬಾರದು, ಹೀಗೆ ಸೇವಿಸುವುದರಿಂದ ಇದು ನಿಮಗೆ ವಿಷವಾಗಿ ಪರಿಣಮಿಸಬಹುದು.
ಈ ಸಮಸ್ಯೆ ಇರುವವರು ಅನಾನಸ್ ಹಣ್ಣನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ.
ಅನಾನಸ್.. ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಕ್ಯಾನ್ಸರ್‌ಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ.
ಅನಾನಸ್ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿದ್ದರೂ, ಕೆಲವರು ಇದರಿಂದ ದೂರವಿರಬೇಕು ಎನ್ನುತ್ತಾರೆ ವೈದ್ಯರು.
ಕೆಲವು ಆರೋಗ್ಯ ಸಮಸ್ಯೆ ಇರುವವರು ಅನಾನಸ್ ತಿಂದರೆ ಸಮಸ್ಯೆಯ ತೀವ್ರತೆ ಹೆಚ್ಚಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ಉದರದ ಕಾಯಿಲೆ ಇರುವವರಿಗೆ ಅನಾನಸ್ ಒಳ್ಳೆಯದಲ್ಲ.. ಅವರು ಗ್ಲುಟನ್ ಗೆ ಪ್ರತಿಕ್ರಿಯೆ ಹೊಂದಿರಬಹುದು.
ಅನಾನಸ್‌ನಲ್ಲಿ ಬೊಮೆಲೈನ್ ಎಂಬ ನೈಸರ್ಗಿಕ ಅಂಶವಿದೆ, ಇದರಿಂದ ನಿಮಗೆ ಅನಾನಸ್ ಸೇವನೆಯಿಂದ ಉದರದ ಕಾಯಿಲೆಯ ಲಕ್ಷಣಗಳು ಹೆಚ್ಚಾಗಬಹುದು.
ಅನಾನಸ್ ಹಣ್ಣನ್ನು ಉದರದ ಕಾಯಿಲೆ ಇರುವವರು ಸೇವಿಸುವುದರಿಂದ ಹೊಟ್ಟೆ ಉಬ್ಬರ, ನೋವು ಹಾಗೂ ಇತರ ಸಮಸ್ಯೆಗಳು ಎದುರಾಗಬಹುದು.
ಅಸಿಡಿಟಿ ಸಮಸ್ಯೆ ಇರುವವರು ಕೂಡ ಅನಾನಸ್ ಸೇವನೆಯಿಂದ ದೂರವಿರಬೇಕು. ಇದನ್ನು ಸೇವಿಸುವುದರಿಂದ ನಿಮಗಿರುವ ಸಮಸ್ಯೆ ಹೆಚ್ಚಾಗುತ್ತದೆ.
ಮೂತ್ರಪಿಂಡದ ಸಮಸ್ಯೆ ಇರುವವರು ಅನಾನಸ್ ಹಣ್ಣನ್ನು ಸೇವಿಸುವುದರಿಂದ ಇದು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಿ ಆರೋಗ್ಯಕ್ಕೆ ಕಂಟಕವಾಗಿ ಪರಿಣಮಿಸುತ್ತದೆ.
ಅನಾನಸ್ ಹಣ್ಣನ್ನು ಯಾರೆ ಆಗಿರಲಿ ಮಿತವಾಗಿ ಸೇವಿಸುವುದು ತುಂಬಾ ಮುಖ್ಯ.