ದಾಳಿಂಬೆ

ದಾಳಿಂಬೆ ಜ್ಯೂಸ್ ಅನ್ನು ಬೆಳಗ್ಗಿನ ಸಮಯಕ್ಕಿಂತ ರಾತ್ರಿ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು.

Chetana Devarmani
Aug 15,2023

ದಾಳಿಂಬೆ

ಇದರಲ್ಲಿರುವ ನಾರಿನಂಶವು ದೇಹದಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಅನ್ನು ಸಹ ಕರಗಿಸುತ್ತದೆ.

ದಾಳಿಂಬೆ

ದಾಳಿಂಬೆಯಲ್ಲಿ ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಪ್ರೋಟೀನ್‌ ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ.

ದಾಳಿಂಬೆ

ತೂಕ ಕಳೆದುಕೊಳ್ಳಲು ಬಯಸುವವರು ದಾಳಿಂಬೆ ಹಣ್ಣನ್ನು ತಿನ್ನುವುದು ಪ್ರಯೋಜನಕಾರಿಯಾಗಿದೆ.

ದಾಳಿಂಬೆ

ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ದಾಳಿಂಬೆ ಹಣ್ಣನ್ನು ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸಬಹುದು ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.

ದಾಳಿಂಬೆ

ದಾಳಿಂಬೆ ಹಣ್ಣನಲ್ಲಿ ಇರುವ ಫೈಬರ್ ಮಲಬದ್ಧತೆ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದೆ.

ದಾಳಿಂಬೆ

ದಾಳಿಂಬೆ ಬೀಜಗಳಿಂದ ತಯಾರಿಸಿದ ಜ್ಯೂಸ್ ಅನ್ನು ರಾತ್ರಿಯಲ್ಲಿ ಕುಡಿಯುವುದರಿಂದ ರಕ್ತಹೀನತೆಯನ್ನು ಸುಲಭವಾಗಿ ನಿವಾರಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ದಾಳಿಂಬೆ

ಆಗಾಗ್ಗೆ ಮೂಳೆ ಸಮಸ್ಯೆಯಿಂದ ಬಳಲುತ್ತಿರುವವರು ಒಂದು ಲೋಟ ದಾಳಿಂಬೆ ರಸಕ್ಕೆ ಒಂದು ಚಮಚ ಶುಂಠಿ ರಸವನ್ನು ಬೆರೆಸಿ ಬೆಳಗಿನ ಉಪಾಹಾರಕ್ಕೆ ಅರ್ಧ ಗಂಟೆ ಮೊದಲು ಕುಡಿಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ದಾಳಿಂಬೆ

ದಾಳಿಂಬೆ ರಸವು ಕೀಲು ನೋವು ಮತ್ತು ಮಂಡಿ ನೋವನ್ನು ಸಹ ನಿವಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ದಾಳಿಂಬೆ

ನಿದ್ರಾಹೀನತೆಯಿಂದ ಬಳಲುತ್ತಿರುವವರು ದಾಳಿಂಬೆ ಜ್ಯೂಸ್ ಅನ್ನು ಪ್ರತಿದಿನ ಮಲಗುವ ಮುನ್ನ ಕುಡಿದರೆ ಪ್ರಯೋಜನವಾಗುತ್ತದೆ.

VIEW ALL

Read Next Story