ಬೆವರು, ತೇವಾಂಶ, ತುರಿಕೆಯಿಂದಾಗಿ ತಲೆ ಹೊಟ್ಟು ಮಾತ್ರವಲ್ಲದೆ ಕೆಲವೊಮ್ಮೆ ತಲೆಯಲ್ಲಿ ಹೇನುಗಳು ಕೂಡ ಕಾಣಿಸಿಕೊಳ್ಳುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಬಹಳ ಸುಲಭವಾಗಿ ಹರಡುತ್ತವೆ. ನೀವೂ ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಇಲ್ಲಿದೆ ಸುಲಭ ಮನೆಮದ್ದುಗಳು.
ತಲೆಯಲ್ಲಿ ಹೇನಿನ ಸಮಸ್ಯೆ ಹೆಚ್ಚು ಕಾಡುತ್ತಿದ್ದರೆ ಈರುಳ್ಳಿ ರಸವನ್ನು ಹಚ್ಚಿ 20 ನಿಮಿಷಗಳ ಬಳಿಕ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ನೀರಿನೊಂದಿಗೆ ವಿನೆಗರ್ ಮಿಶ್ರಣ ಮಾಡಿ ಕೂದಲಿನ ಬುಡದಿಂದ ಹಚ್ಚಿ. ಒಂದು ಗಂಟೆ ಬಳಿಕ ಕೂದಲನ್ನು ತೊಳೆಯಿರಿ. ಕೆಲವೇ ದಿನಗಳಲ್ಲಿ ಹೇನುಗಳು ಮಾಯವಾಗುತ್ತವೆ.
ಎರಡು ಚಮಚ ನಿಂಬೆ ರಶದೊಂದಿಗೆ ಒಂದು ಚಮಚ ಶುಂಠಿ ಪೇಸ್ಟ್ ಮಿಕ್ಸ್ ಮಾಡಿ ಬುಡದಿಂದ ಕೂದಲಿಗೆ ಹಚ್ಚಿ. 20 ನಿಮಿಷಗಳ ಬಳಿಕ ತಣ್ಣೀರಿನಿಂದ ಹೇರ್ ವಾಶ್ ಮಾಡಿ.
ಬೇವಿನ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಶಕ್ತಿ ತುಂಬಿದೆ. ಇದರನ್ನು ಪೇಸ್ಟ್ ಮಾಡಿ ಕೂದಲಿಗೆ ಅನ್ವಯಿಸಿ. 2 ಗಂಟೆ ಬಳಿಕ ಹೇರ್ ವಾಶ್ ಮಾಡಿದರೆ ನಿಮ್ಮ ತಲೆಯಿಂದ ಹೇನುಗಳು ಮಾಯವಾಗುತ್ತವೆ.
ಬೆಳ್ಳುಳ್ಳಿ ನೈಸರ್ಗಿಕ ಆಂಟಿ-ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿದೆ. ಬೆಳ್ಳುಳ್ಳಿ ರಸವನ್ನು ನಿಂಬೆ ರಶದೊಂದಿಗೆ ಮಿಕ್ಸ್ ಮಾಡಿ ಹಚ್ಚಿ. 30 ನಿಮಿಷಗಳ ಬಳಿಕ ಹೇರ್ ವಾಶ್ ಮಾಡುವುದರಿಂದ ಹೇನುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಕೂದಲಿಗೆ ಆಲಿವ್ ಎಣ್ಣೆ ಹಚ್ಚುವುದರಿಂದ ಹೇನುಗಳು ಬೇಗ ಸಾಯುತ್ತವೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಕೂದಲಿಗೆ ಆಲಿವ್ ಎಣ್ಣೆಯನ್ನು ಅನ್ವಯಿಸಿ ಶವರ್ ಕ್ಯಾಪ್ ಧರಿಸಿ ಮಲಗಿ. ಬೆಳಿಗ್ಗೆ ಎದ್ದು ಸ್ನಾನ ಮಾಡಿ.
ಒಂದು ಟೀಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಪೇಸ್ಟ್ ತಯಾರಿಸಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಅರ್ಧ ಘಂಟೆಯ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಹೀಗೆ ಮಾಡುವುದರಿಂದ ಕೂಡಲಿನಲ್ಲಿರುವ ಹೇನುಗಳು ನಾಶವಾಗುತ್ತವೆ.
ತುಳಸಿ ಎಲೆಗಳನ್ನು ಪೇಸ್ಟ್ ಮಾಡಿ ಕೂದಲಿನ ಬುಡದಿಂದ ಹಚ್ಚಿ 20 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಹೇನುಗಳು ಮಾಯವಾಗುತ್ತವೆ.
ಉಪ್ಪಿನೊಂದಿಗೆ ವೆನಿಗರ್ ಮಿಕ್ಸ್ ಮಾಡಿ ಈ ಬೆಸ್ಟ್ ಅನ್ನು ಕೂದಲಿನ ಬುಡದಿಂದ ಹಚ್ಚಿ ಒಂದು ಗಂಟೆ ಬಳಿಕ ಹೇರ್ ವಾಶ್ ಮಾಡುವುದರಿಂದ ಹೇನುಗಳನ್ನು ನಾಶಪಡಿಸಬಹುದು.
ಹರ್ಬಲ್ ಟೀ ಟ್ರೀ ಆಯಿಲ್ ಒಂದು ನೈಸರ್ಗಿಕ ಕೀಟನಾಶಕವಾಗಿದೆ. ಕೊಬ್ಬರಿ ಎಣ್ಣೆಯೊಂದಿಗೆ ಟ್ರೀ ಟೀ ಆಯಿಲ್ ಬೆರೆಸಿ ಕೂದಲಿಗೆ ಹಚ್ಚಿ. ಒಂದೆರಡು ಗಂಟೆಗಳ ನಂತರ ಹೇರ್ ವಾಶ್ ಮಾಡುವುದರಿಂದ ಹೇನುಗಳಿಂದ ಶಾಶ್ವತವಾಗಿ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.