ಹಲವು ರೋಗಗಳಿಗೆ ರಾಮಬಾಣ ಗಸಗಸೆ
ಆಹಾರದ ಸ್ವಾದವನ್ನು ಹೆಚ್ಚಿಸುವ ಗಸಗಸೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.
ಬೇಸಿಗೆಯಲ್ಲಿ ದೇಹವನ್ನು ತಂಪುಗೊಳಿಸುವ ಶಕ್ತಿ ಹೊಂದಿರುವ ಗಸಗಸೆಯನ್ನು ಆಯುರ್ವೇದ ಔಷಧಿಗಳಿಗೂ ಬಳಸಲಾಗುತ್ತದೆ. ಇದರ ಪ್ರಮುಖ್ ಪ್ರಯೋಜನಗಳೆಂದರೆ...
ಗಸಗಸೆ ಸ್ವಭಾವತಃ ತಂಪಾದ ಸ್ವಭಾವವನ್ನು ಹೊಂದಿರುವುದರಿಂದ ಇದರ ಬಳಕೆಯು ದೇಹವನ್ನು ತಂಪಾಗಿಸುತ್ತದೆ. ಮಾತ್ರವಲ್ಲ ಬಾಯಾರಿಕೆಯನ್ನೂ ನೀಗಿಸುತ್ತದೆ.
ಗಸಗಸೆ ಬಳಕೆಯಿಂದ ಜ್ವರ, ವಾಂತಿಯಂತಹ ಸಮಸ್ಯೆ ಮಾತ್ರವಲ್ಲ ಚರ್ಮ ರೋಗಗಳಿಂದಲೂ ಪರಿಹಾರ ಪಡೆಯಬಹುದು.
ಗಸಗಸೆಯು ಮೆದುಳಿನ ಶಾಖವನ್ನು ಶಮನಗೊಳಿಸುವ ಮೂಲಕ ಮನಸ್ಸನ್ನು ಶಾಂತಗೊಳಿಸುತ್ತದೆ.
ಗಸಗಸೆ ಬಳಕೆಯಿಂದ ಆಗಾಗ್ಗೆ ಕಾಡುವ ತಲೆನೋವಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ನಿಯಮಿತವಾಗಿ ಗಸಗಸೆ ಬಳಸುವುದರಿಂದ ಇದು ಮುಟ್ಟಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಸಹಕಾರಿಯಾಗಿದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.