ಇಂದೋರ್ ಆಹಾರ ಪ್ರಿಯರ ಸ್ವರ್ಗ ಸರಾಫಾ ಬಜಾರ್ ರಾತ್ರಿಯಲ್ಲಿ ಪೋಹಾ, ಜಿಲೇಬಿ ಸೇರಿದಂತೆ ಹಲವು ಆಯ್ಕೆಗಳೊಂದಿಗೆ ಫೀಮಸ್ ಆಗಿದೆ.
ವಾರಣಾಸಿ ತನ್ನ ಆಧ್ಯಾತ್ಮಿಕ ಮಹತ್ವಕ್ಕಾಗಿ ಮಾತ್ರವಲ್ಲದೆ, ಸ್ಟ್ರೀಟ್ ಫುಡ್‌ಗೂ ಹೆಸರುವಾಸಿಯಾಗಿದೆ. ಇದು ಕಚೋರಿ, ಚಾಟ್ ಮತ್ತು ಮಲೈ ಲಸ್ಸಿಗಳಿಗೆ ಹೆಸರುವಾಸಿಯಾಗಿದೆ.
ಚೆನ್ನೈ ಇಡ್ಲಿ, ದೋಸೆ, ವಡಾ ಮತ್ತು ಭಜ್ಜಿ ಸೇರಿದಂತೆ ಮರೀನಾ ಬೀಚ್‌ನ ಉದ್ದಕ್ಕೂ ದಕ್ಷಿಣ ಭಾರತದ ವಿವಿಧ ಸ್ಟ್ರೀಟ್ ಫುಡ್‌ಗೆ ಫೇಮಸ್ ಆಗಿದೆ.
ಅಮೃತಸರವು ತನ್ನ ಪಂಜಾಬಿ ಪಾಕಪದ್ದತಿಗೆ ಹೆಸರುವಾಸಿಯಾಗಿದೆ. ಇದರ ಸುತ್ತಲೂ ನೀವು ಅಮೃತಸರಿ ಕುಲಾ, ಚೋಲೆ ಭತುರೆ, ಸಾರ್ಸನ್ ದ ಸಾಗ್, ಮಕ್ಕೆ ಡಿ ರೋಟಿ ಮತ್ತು ಲಸ್ಸಿಯಂತಹ ಸ್ಟ್ರೀಟ್ ಫುಡ್ ಅನ್ನು ಸವಿಯಬಹುದು.
ಲಕ್ನೋ ಕಬಾಬ್‌ಗಳ ಜನ್ಮಸ್ಥಳವಾಗಿದೆ. ಗಲೌಟಿ ಕಬಾಬ್‌ಗಳು, ಟುಂಡೇ ಕಬಾಬ್ ಮತ್ತು ಬಾಸ್ಕೆಟ್ ಚಾಟ್‌ನಂತಹ ರುಚಿಕರವಾದ ಸ್ಟ್ರೀಟ್ ಫುಡ್ ಅನ್ನು ನೀವು ಇಲ್ಲಿ ಸವಿಯಬಹುದು.
ಚಾಂದಿನಿ ಚೌಕ್ ಪ್ರತಿಯೊಬ್ಬ ಆಹಾರಪ್ರಿಯರ ಕನಸಿನ ತಾಣವಾಗಿದೆ. ಭಾರತದ ಆಹಾರ ರಾಜಧಾನಿ ಎಂದು ಕರೆಯಲ್ಪಡುವ ಚಾಂದಿನಿ ಚೌಕ್ ನಿಮಗೆ ವ್ಯಾಪಕವಾದ ಆಹಾರ ಆಯ್ಕೆಗಳನ್ನು ನೀಡುತ್ತದೆ.