ಹಲ್ಲುಗಳಲ್ಲಿನ ಹುಳುಕು ಹೋಗಲಾಡಿಸಲು ಕೆಲವು ಮನೆ ಮದ್ದುಗಳನ್ನು ಬಳಸಬಹುದು.
ಈ ಮನೆ ಮದ್ದುಗಳನ್ನು ಬಳಸುವುದರಿಂದ ಹಲ್ಲು ಹುಳುಕಾಗಿ ಉದುರುವುದನ್ನು ತಡೆಯಬಹುದು.
ಅರಶಿನ ಮತ್ತು ಉಪ್ಪನ್ನು ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಹಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ಹಲ್ಲಿನ ಹುಳುಕು ನಿರ್ಮೂಲನೆಯಾಗುವುದು
ಹಲ್ಲಿನ ಹುಳುಕು ಹೋಗಲಾಡಿಸಲು ಹರಳೆಣ್ಣೆ ಮತ್ತು ಕಲ್ಲುಪ್ಪಿನ ಮಿಶ್ರಣವನ್ನು ಬೆರೆಸಿ ಹಚ್ಚಬಹುದು.
ತೆಂಗಿನೆಣ್ಣೆಯನ್ನು ಬಾಯಿಯೊಳಗೆ ಇತ್ತು ಸ್ವಲ್ಪ ಹೊತ್ತಿನ ನಂತರ ಗಾರ್ಗ್ಲಲ್ ಮಾಡಿದರೆ ಹುಳುಕು ಹಲ್ಲಿನಿಂದ ಪರಿಹಾರ ನೀಡುತ್ತದೆ.
ಬೆಳ್ಳುಳ್ಳಿಯನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ, ಈ ನೀರಿನಿಂದ ಹಲ್ಲನ್ನು ಉಜ್ಜಿಕೊಳ್ಳಿ.
ಬೇವಿನ ಟೂತ್ ಪಾಸ್ಟ್ ನಿಂದ ಹಲ್ಲನ್ನು ಉಜ್ಜಿದರೆ ಹಲ್ಲಿನ ಹುಳಿಕಿನಿಂದ ಪರಿಹಾರ ಸಿಗುತ್ತದೆ.
ಹಲ್ಲಿನ ಹುಳುಕು ವಿಪರೀತ ನೋವಿಗೆ ಕಾರಣವಾಗುತ್ತದೆ. ಈ ಹೊತ್ತಿನಲ್ಲಿ ಹತ್ತಿಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ ಹಲ್ಲಿನ ಮೇಲಿಟ್ಟರೆ ನೋವಿನಿಂದ ಮುಕ್ತಿ ಸಿಗುವುದು.
ಸೂಚನೆ :ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.