ಅಕ್ಕಿ ನೆನೆಸಿಟ್ಟ ನೀರು ಸಾಕು ಮುಖದ ಕಾಂತಿ ಹೆಚ್ಚಿಸಲು

ಅಕ್ಕಿ ನೀರು

ಅಕ್ಕಿ ನೆನೆಸಿಟ್ಟ ನೀರು ಅತ್ಯಂತ ಲಾಭದಾಯಕವಾಗಿದೆ. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುವುದು.

ಟೋನರ್

ಅಕ್ಕಿ ನೆನೆಸಿಟ್ಟ ನೀರು ನ್ಯಾಚ್ಯುರಲ್ ಕ್ಲೆಂಸರ್ ನ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದನ್ನು ಟೋನರ್ ರೂಪದಲ್ಲಿಯೂ ಬಳಸಬಹುದು.

ಸ್ಪ್ರೇ ಕೂಡಾ ಮಾಡಬಹುದು

ಒಂದು ಕಪ್ ಅಕ್ಕಿಯನ್ನು ಒಂದೂವರೆ ಕಪ್ ನೀರಿನಲ್ಲಿ ನೆನೆಸಿಡಬೇಕು. ನಂತರ ಈ ನೀರನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಬೇಕು. ಅಥವಾ ಸ್ಪ್ರೇ ಬಾಟಲಿಗೆ ಹಾಕಿ ಮುಖದ ಮೇಲೆ ಸ್ಪ್ರೇ ಕೂಡಾ ಮಾಡಬಹುದು.

ಅನ್ನ ಬೇಯಿಸಿದ ನೀರು

ಇದಲ್ಲದೆ ಅನ್ನ ಬೇಯಿಸಿದ ನೀರನ್ನು ಕೂಡಾ ಮುಖಕ್ಕೆ ಬಳಸಬಹುದು.

ಫೇಸ್ ಪ್ಯಾಕ್

ಅಕ್ಕಿ ನೆನೆಸಿಟ್ಟ ನೀರನ್ನು ಫೇಸ್ ಪ್ಯಾಕ್ ತಯಾರಿಸಲು ಕೂಡಾ ಬಳಸಬಹುದು.

ಮಸಾಜ್

ಅಕ್ಕಿ ನೆನೆಸಿಟ್ಟ ನೀರನ್ನು ಐಸ್ ಕ್ಯೂಬ್ ಮಾಡಿಟ್ಟುಕೊಂಡು ಅದನ್ನು ಮುಖದ ಮೇಲೆ ತಿಕ್ಕಿ ಮಸಾಜ್ ಮಾಡಬಹುದು.

ಕಲೆಗಳು ಮಾಯ

ಅಕ್ಕಿ ನೆನೆಸಿಟ್ಟ ನೀರನ್ನು ನಿತ್ಯವೂ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಕಲೆಗಳು ಮಾಯವಾಗುವುದಲ್ಲದೆ, ಚರ್ಮದಲ್ಲಿನ ಬಣ್ಣದಲ್ಲಿಯೂ ಬದಲಾವಣೆಯಾಗುತ್ತದೆ.

ಸುಕ್ಕು ತಡೆಯುತ್ತದೆ

ಈ ನೀರಿನಲ್ಲಿರುವ ಪೋಷಕ ತತ್ವದ ಸಹಾಯದಿಂದ ಚರ್ಮ ವಯಸ್ಸಾದಂತೆ ಕಾಣುವುದನ್ನು ಕೂಡಾ ತಡೆಯಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ

VIEW ALL

Read Next Story