ಭಾರತದ ಅತ್ಯಂತ ಕಿರಿಯ ಕೋಚ್ ಯಾರು ಗೊತ್ತಾ?

ಅಶೋಕ್ ಮಂಕಡ್

ಬ್ಯಾಟಿಂಗ್ ಲೆಜೆಂಡ್ ವಿನೋದ್ ಮಂಕಡ್ ಅವರ ಪುತ್ರ ಅಶೋಕ್ ಮಂಕಡ್ ಭಾರತದ ಅತ್ಯಂತ ಕಿರಿಯ ಮುಖ್ಯ ಕೋಚ್ ಆಗಿದ್ದರು. 1982ರಲ್ಲಿ, ಕೇವಲ 35 ನೇ ವಯಸ್ಸಿನಲ್ಲಿ ಭಾರತ ತಂಡದ ಕೋಚ್ ಆಗಿ ನೇಮಕಗೊಂಡರು. ಅವರ ಅವಧಿಯಲ್ಲಿ ತಂಡದ ಪ್ರದರ್ಶನ ಉತ್ತಮವಾಗಿರದೇ ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸೋಲು ಕಾಣುವಂತಾಗಿತ್ತು.

ಸಂದೀಪ್ ಪಾಟೀಲ್

ಸಂದೀಪ್ ಪಾಟೀಲ್ (40 ವರ್ಷ) 1983 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. 1996 ರಲ್ಲಿ 40 ನೇ ವಯಸ್ಸಿನಲ್ಲಿ ಭಾರತ ತಂಡದ ಕೋಚ್ ಆದರು.

ಕಪಿಲ್ ದೇವ್

ಕಪಿಲ್ ದೇವ್ (40 ವರ್ಷ) 1983 ರ ವಿಶ್ವಕಪ್‌ʼನಲ್ಲಿ ಭಾರತವನ್ನು ಮುನ್ನಡೆಸಿದ ನಾಯಕ. 1999ರಲ್ಲಿ 40ನೇ ವಯಸ್ಸಿನಲ್ಲಿ ಭಾರತ ತಂಡದ ಕೋಚ್ ಆದರು.

ಗೌತಮ್ ಗಂಭೀರ್

ಗೌತಮ್ ಗಂಭೀರ್ (42 ವರ್ಷ) 2024ರಲ್ಲಿ 42 ನೇ ವಯಸ್ಸಿನಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ʼಗೆ ಮಾರ್ಗದರ್ಶಕರಾಗಿದ್ದ ಇವರು ಮುಂದಿನ ದಿನಗಳಲ್ಲಿ ಭಾರತಕ್ಕೆ ಉತ್ತಮ ಕೋಚಿಂಗ್‌ ನೀಡುವ ನಿರೀಕ್ಷೆಯಿದೆ.

VIEW ALL

Read Next Story