ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಪದೇ ಪದೇ ಹೇಳಲಾಗುತ್ತದೆ.
ಸಿಗರೇಟ್ ಆರೋಗ್ಯಕ್ಕೆ ಹಾನಿಕರ ಅಂತ ಗೊತ್ತಿದ್ರೂ ದಿನಕ್ಕೆ ಪ್ಯಾಕ್ಗಟ್ಟಲೇ ಸಿಗರೇಟ್ ಸೇದುತ್ತಾರೆ.
ಏಕಾಏಕಿ ಧೂಮಪಾನವನ್ನು ನಿಲ್ಲಿಸಿದರೆ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತವೆ ಅವುಗಳ ವಿರುದ್ದ ಹೋರಾಡಬೇಕಾಗುತ್ತದೆ.
ಇದ್ದಕ್ಕಿದ್ದಂತೆ ಧೂಮಪಾನವನ್ನು ತ್ಯಜಿಸುವುದರಿಂದ ಹುಚ್ಚು ಹಿಡಿದಂತಾಗುತ್ತದೆ, ಭಯ ಹೆಚ್ಚಾಗುತ್ತದೆ.
ವ್ಯಕ್ತಿಯ ದೇಹ ಮತ್ತು ಮಾನಸಿಕ ಸ್ಥಿತಿಯಲ್ಲಿ ಹಲವು ರೀತಿಯ ಬದಲಾವಣೆಯು ಸಂಭವಿಸುತ್ತದೆ.
ಧೂಮಪಾನವನ್ನು ತ್ಯಜಿಸಿದ 4 ರಿಂದ 8 ಗಂಟೆಗಳಲ್ಲಿ ದೇಹದಲ್ಲಿನ ಆಮ್ಲಜನಕದ ಮಟ್ಟವು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತದೆ.
ಹೆಚ್ಚು ಸಿಗರೇಟ್ ಸೇದುವುದರಿಂದ ಉತ್ಪತ್ತಿಯಾಗುವ ಕಾರ್ಬನ್ ಮಾನಾಕ್ಸೈಡ್ ಕ್ರಮೇಣ ಕಡಿಮೆಯಾಗುತ್ತಿದೆ ಎನ್ನುತ್ತಾರೆ ತಜ್ಞರು.
ಸಿಗರೇಟ್ ಬಿಟ್ಟ 12 ಗಂಟೆಗಳ ನಂತರ ಅಂದರೆ ಅರ್ಧ ದಿನ ಕಳೆದಿದೆ ಖಿನ್ನತೆಗೆ ಒಳಗಾಗಿ ಒತ್ತಡಕ್ಕೆ ಸಿಲುಕುತ್ತಾರೆ.
ಕಿರಿಕಿರಿ, ಆತಂಕ, ಒತ್ತಡ ಮತ್ತು ಮೂಡ್ಸ್ವಿಂಗ್ಗಳು ಒಂದೇ ಬಾರಿಗೆ ಕಾಣಿಸಿಕೊಳ್ಳುತ್ತವೆ. ಏಕಾಂಗಿ ಭಾವನೆ ಬರುತ್ತದೆ.
ಗಟ್ಟಿ ಧೈರ್ಯ ಮಾಡಿ ಸಿಗರೇಟ್ ಮುಟ್ಟದಿದ್ದರೆ ದೇಹದಲ್ಲಿ ರಕ್ತಸಂಚಾರ ಚೆನ್ನಾಗಿ ಆಗುತ್ತದೆ, ಆರೋಗ್ಯ ಸುಧಾರಿಸುತ್ತದೆ, ಸ್ನಾಯುಗಳು ಸದೃಢವಾಗುತ್ತವೆ.