ಅಡುಗೆ ಮನೆ ಕೆಲಸವನ್ನು ಬಹಳ ಸರಳವಾಗಿಸುವ ಸುಲಭ ವಿಧಾನ

Ranjitha R K
Jul 03,2023


ಅಡಿಗೆ ಕೆಲಸ ದೂರದಿಂದ ನೋಡುವುದಕ್ಕಷ್ಟೇ ಸುಲಭ. ಅಡುಗೆ ಸಮಯದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಇಂದು ನಾವು ನಿಮ್ಮ ಅಡುಗೆಯನ್ನು ಸುಲಭಗೊಳಿಸುವಂತಹ ಕೆಲವು ಅಡುಗೆ ಟ್ರಿಕ್ಸ್ ಗಳನ್ನು ಹೇಳಲಿದ್ದೇವೆ.


ಕುಕ್ಕರ್ ನಲ್ಲಿ ಬೇಳೆ ಬೇಯಿಸುವ ಹೊತ್ತಿನಲ್ಲಿ ಕುಕ್ಕರ್ ಒಳಗೆ ಒಂದು ಸಣ್ಣ ಸ್ಟೀಲ್ ಬೌಲ್ ಇಡಿ. ಹೀಗೆ ಮಾಡಿದರೆ ಕುಕ್ಕರ್ ಸೀಟಿಯಾಗುವಾಗ ಬೇಳೆ ಅಥವಾ ನೀರು ಹೊರಗೆ ಚಿಮ್ಮುವುದಿಲ್ಲ.


ಅಡುಗೆಯಲ್ಲಿ ಉಪ್ಪು ಹೆಚ್ಚಾಗಿದ್ದರೆ ಗೋಧಿ ಹಿಟ್ಟಿನಲ್ಲಿ ಸಣ್ಣ ಉಂಡೆಗಳನ್ನು ಮಾಡಿ ಆ ಅಡುಗೆಯ ಒಳಗೆ ಹಾಕಿ .


ಪಾಯಸ ಮಾಡುವಾಗ ಯಾವಾಗಲೂ ದಪ್ಪ ತಳದ ಪಾತ್ರೆಯನ್ನೇ ತೆಗೆದುಕೊಳ್ಳಿ. ಮಾತ್ರವಲ್ಲ ಪಾಯಸ ಮಾಡುವಾಗ ಅದನ್ನು ಸಣ್ಣ ಉರಿಯಲ್ಲಿಯೇ ಬೇಯಿಸಿ.


ಅಡುಗೆಯನ್ನು ಪದೇ ಪದೇ ಬಿಸಿ ಮಾಡುತ್ತಿದ್ದರೆ ಅದರ ಪೋಷಕಾಂಶ ಕಡಿಮೆಯಾಗುತ್ತದೆ ಮಾತ್ರವಲ್ಲ ರುಚಿಯೂ ಕಡಿಮೆಯಾಗುತ್ತದೆ.


ಮನೆಯಲ್ಲಿ ಮೊದಲೇ ಶುಂಟಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ.


ಅಡುಗೆ ಮನೆಯ ಸ್ಲಾಬ್ ಮೇಲೆ ತರಕಾರಿ ಕಟ್ ಮಾಡುವುದರಿಂದ ಚಾಕು ಮೊಂಡಾಗುತ್ತದೆ. ಹೀಗಾಗಿ ತರಕಾರಿ ಕಟ್ ಮಾಡಲು ಚೋಪ್ಪಿಂಗ್ ಬೋರ್ಡ್ ಅನ್ನೇ ಬಳಸಿ.


ಅಡುಗೆ ಮಾಡುತ್ತಿರುವ ವೇಳೆ ಟೊಮೇಟೊ ಇಲ್ಲ ಎನ್ನುವುದು ಗಮನಕ್ಕೆ ಬಂದರೆ ಅದರ ಬದಲು ಕೆಚ್ ಅಪ್ ಅಥವಾ ಸಾಸ್ ಬಳಸಬಹುದು.


ನೀವು ಕೂಡಾ ಅಡುಗೆ ಮನೆಯಲ್ಲಿ ಕೆಲಸ ಮಾಡುವವರಾದರೆ ಈ ಹ್ಯಾಕ್ಸ್ ಅನ್ನು ಅಳವಡಿಸಿಕೊಳ್ಳಿ.

VIEW ALL

Read Next Story