ಇಂದು ಗುರುಪೂರ್ಣಿಮಾ ಪ್ರಯುಕ್ತ ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ವೈಭವದ ಗುರುಪೂರ್ಣಿಮೆ ಹಬ್ಬವನ್ನ ಆಚರಿಸಲಾಯಿತು.
ಬೆಂಗಳೂರಿನ ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಇಂದು ವಿಶೇಷ ಗುರುಪೂರ್ಣಿಮೆ ಆಚರಿಸಲಾಯಿತು.
ಶಿರಡಿ ಸಾಯಿ ಬಾಬಾರಿಗೆ ವಿಶೇಷ ಅಲಂಕಾರ, ವೈಭವದ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಏರ್ಪಡಿಸಲಾಯ್ತು.
ಗುರು ಪೂರ್ಣಿಮೆ ಪ್ರಯುಕ್ತ ನಗರದ ಎಲ್ಲಾ ಸಾಯಿಬಾಬಾ ಮಂದಿರಗಳಲ್ಲಿ ಬಾದಾಮಿ, ಖರ್ಜೂರ, ಹಣ್ಣುಗಳಿಂದ ದೇವಾಲಯವನ್ನು ಸಿಂಗರಿಸಲಾಗಿದ್ದು ಕೆಂದು ಬಣ್ಣದ ಎಳನೀರಿಯಿಂದ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.
ಬಾಬಾರನ್ನು ಬಗೆ ಬಗೆಯ ಹೂವುಗಳು, ಹಣ್ಣುಗಳು, ಬಾದಾಮಿ, ಖರ್ಜೂರ, ಒಣಹಣ್ಣುಗಳು, ಬೆಲ್ಲದಿಂದ ಸಿಂಗರಿಸಿ, ಕೆಂದು ಬಣ್ಣದ ಎಳನೀರಿನಿಂದ ವಿಶೇಷ ಅಲಂಕಾರ ಮಾಡಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ಮೋಹನ್ ರಾಜ್ ಗುರು ಪೂರ್ಣಿಮೆಯಂದು ಶಿರಡಿ ಸಾಯಿ ಬಾಬಾ ಅವರಿಗೆ ಅಭಿಷೇಕ, ಹೋಮ, ಪ್ರಸಾದ ಸೇವೆ, ಅಲಂಕಾರ ಸೇವೆ, ಸರ್ವ ಸೇವೆ ಒಳಗೊಂಡಂತೆ ಎಲ್ಲಾ ರೀತಿಯ ಪೂಜಾ ವಿಧಿ ವಿಧಾನಗಳನ್ನು ಏರ್ಪಡಿಸಲಾಗಿತ್ತು.ಇಂದು ಬೆಳಿಗ್ಗೆಯಿಂದ ರಾತ್ರಿವರೆಗೆ ಭಕ್ತರಿಗೆ ನಿರಂತರವಾಗಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ವರ್ಷ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸುತ್ತಿದೆ.
ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿದೆ.
ಸಾಯಿ ಬಾಬಾರ "ಸಬ್ ಕಾ ಮಾಲೀಕ್ ಏಕ್ ಹೇ" ಎಂಬ ಪರಿಕಲ್ಪನೆಯಡಿ ಬಡವ, ಬಲ್ಲಿದ ಬೇಧ-ಭಾವವಿಲ್ಲದೇ ಎಲ್ಲಾ ಸಮುದಾಯದವರಿಗೆ ಮುಕ್ತ ಸ್ವಾಗತವನ್ನ ಕೋರಲಾಗಿದೆ ಎಂದು ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ಮೋಹನ್ ರಾಜ್ ತಿಳಿಸಿದ್ದಾರೆ.