ಹಲ್ಲು ನೋವಿಗೆ ಬೆಸ್ಟ್ ಮನೆಮದ್ದು ಉಪ್ಪು. ಉಪ್ಪು ನೀರಿನಿಂದ ಗಾಗಲ್ ಮಾಡುವುದು, ಇಲ್ಲವೇ ಉಪ್ಪು ಬಳಸಿ ಹಲ್ಲುಜ್ಜುವುದರಿಂದ ಹಲ್ಲಿನ ನೋವಿಗೆ ಕೂಡಲೇ ಪರಿಹಾರ ದೊರೆಯುತ್ತದೆ.
ತುಳಸಿ ದಳದಲ್ಲಿ ಕಲ್ಲುಪ್ಪು ಇಟ್ಟು ಎಲೆಯನ್ನು ನೋವಿರುವ ಹಲ್ಲಿನ ಮೇಲಿಟ್ಟು ಬಿಗಿಯಾಗಿ ಕಚ್ಚಿ ಹಿಡಿಯುವುದರಿಂದ ಕೆಲವೇ ಕ್ಷಣಗಳಲ್ಲಿ ನೋವು ಮಾಯವಾಗುತ್ತದೆ.
ಹಲ್ಲು ನೋವಿರುವ ಜಾಗದಲ್ಲಿ ಎರಡು ಲವಂಗವನ್ನು ಒತ್ತರಿಸಿ, ಇಲ್ಲವೇ ಹತ್ತಿ ಉಂಡೆಯಲ್ಲಿ ಲವಂಗದ ಎಣ್ಣೆ ಅದ್ದಿ ಹಚ್ಚುವುದರಿಂದ ನೋವು ಕೂಡಲೇ ಉಪಶಮನವಾಗುತ್ತದೆ.
ಬೆಳ್ಳುಳ್ಳಿ ಜಜ್ಜಿ ಪೇಸ್ಟ್ ಮಾಡಿ ನೋವಿರುವ ಹಲ್ಲಿನ ಜಾಗದಲ್ಲಿ ಸವರುವುದರಿಂದ ಕೆಲವೇ ಕ್ಷಣಗಳಲ್ಲಿ ನೋವು ಮಾಯವಾಗುತ್ತದೆ.
ಚಿಟಿಕೆ ಇಂಗಿಗೆ ಒಂದು ಹನಿ ನಿಂಬೆ ರಸ ಮಿಶ್ರಣ ಮಾಡಿ ಹಲ್ಲು ಮತ್ತು ನೋವಿರುವ ವಸುಡಿನ ಜಾಗದಲ್ಲಿ ಲೇಪಿಸುವುದರಿಂದ ಕೆಲವೇ ನಿಮಿಷಗಳಲ್ಲಿ ನೋವು ಮಾಯವಾಗುತ್ತದೆ.
ಅತಿಯಾದ ಹಲ್ಲು ನೋವಿದ್ದರೆ ಐಸ್ ಪ್ಯಾಕ್ ಅನ್ನು ಹೊರಗಿಂದ ಅನ್ವಯಿಸುವುದರಿಂದ ಕೂಡಲೇ ನೋವು ನಿವಾರಣೆಯಾಗುತ್ತದೆ.
ಸಣ್ಣಗೆ ಹಚ್ಚಿದ ಹಸಿ ಈರುಳ್ಳಿಯನ್ನು ಹಲ್ಲು ನೋವಿರುವ ಜಾಗದಲ್ಲಿ ಇಟ್ಟು ನಿಧಾನವಾಗಿ ಅಗಿದರೆ ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶವೂ ಕೂಡಲೇ ನೋವನ್ನು ನಿವಾರಿಸುತ್ತದೆ.
ತುಳಸಿಯಂತೆ ಪುದೀನ ಎಲೆಗಳು ಕೂಡ ಹಲ್ಲು ನೋವಿನ ನಿವಾರಣೆಗೆ ಅತ್ಯುತ್ತಮ ಮನೆಮದ್ದು. ಒಂದೆರಡು ಪುದೀನ ಎಲೆಗಳನ್ನು ಉಪ್ಪಿನಲ್ಲಿ ಬೆರೆಸಿ ನೋವಿರುವ ಜಾಗದಲ್ಲಿ ಕೆಳಹೊತ್ತು ಇಟ್ಟರೆ ನೋವು ನಿವಾರಣೆಯಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.