ದೇಹದಲ್ಲಿ ನೀರಿನ ಕೊರತೆಯಾಗುತ್ತಿದ್ದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಪದೇ ಪದೇ ಬಾಯಿ ಒಣಗುತ್ತಿದ್ದು, ತುಟಿಯ ಬಳಿ ಬಿಳಿ ಪದರ ಕಾಣಿಸುತ್ತಿದ್ದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದರ್ಥ.
ದೇಹ ನಿರ್ಜಲೀಕರಣವಾದಾಗ ಮೂತ್ರ ವಿಸರ್ಜನೆ ವೇಳೆ ಉರಿ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಮೂತ್ರದ ಬಣ್ಣ ಕೂಡಾ ಬದಲಾಗುತ್ತದೆ.
ವಿನಾ ಕಾರಣ ಸುಸ್ತಾಗುವುದು, ಮಾಂಸ ಖಂಡಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ
ಬಾಯಿಯಿಂದ ವಾಸನೆ ಬರುತ್ತದೆ. ನಾಲಗೆ ಬಣ್ಣ ಕೂಡಾ ಬದಲಾಗುತ್ತದೆ.
ದೇಹದಲ್ಲಿ ನೀರಿನ ಕೊರತೆಯಾದಾಗ ಮೂತ್ರದ ಸೋಂಕು ಕಾಣಿಸಿಕೊಳ್ಳುತ್ತದೆ.
ದೇಹದಲ್ಲಿ ನೀರಿನ ಕೊರತೆಯಾದಾಗ ಹೃದಯ ಬಡಿತದಲ್ಲಿಯೂ ಏರಿಳಿತವಾಗುತ್ತದೆ.
ದೇಹದಲ್ಲಿ ನೀರಿನ ಕೊರತೆಯಾದಾಗ ಕೆಫಿನ್ ಇರುವ ಪದಾರ್ಥಗಳನ್ನು ಸೇವಿಸಬಾರದು. ಇದು ಸಮಸ್ಯೆಯನ್ನು ಗಂಭೀರವಾಗಿಸುತ್ತದೆ.
ದೇಹದಲ್ಲಿ ನೀರಿನ ಕೊರತೆಯಾದಾಗ ನೀರಿನ ಸೇವನೆ ಮಾತ್ರವಲ್ಲದೆ, ಹಣ್ಣು, ಜ್ಯೂಸ್ ಸೇವನೆ ಕಡೆಯೂ ಗಮನ ಹರಿಸಬೇಕು.
ಸೂಚನೆ :ಈ ಸುದ್ದಿಯನ್ನು ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಳ್ಳಲಾಗಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.