ದೇಹದಲ್ಲಿ ಕಂಡು ಬರುವ ಈ ಸಂಕೇತ ವಿಟಮಿನ್ ಡಿ ಕೊರತೆಯ ಲಕ್ಷಣ

Ranjitha R K
Dec 05,2024

ವಿಟಮಿನ್ ಡಿ ಕೊರತೆ

ವಿಟಮಿನ್ ಡಿ ದೇಹಕ್ಕೆ ಅಗತ್ಯವಿರುವ ಜೀವಸತ್ವ. ಇದರ ಕೊರತೆಯಾದರೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ವಿಟಮಿನ್ ಡಿ ಕೊರತೆ

ವಿಟಮಿನ್ ಡಿ ಕೊರತೆಯಾದರೆ ಸ್ನಾಯುಗಳು ದುರ್ಬಲವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಂಡುಬರುತ್ತಿರುವುದು ಸಾಮಾನ್ಯ ಸಮಸ್ಯೆಯಾಗಿದೆ.

ವಿಟಮಿನ್ ಡಿ ಕೊರತೆ

ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ಅದರ ಲಕ್ಷಣಗಳು ದೇಹದಲ್ಲಿಯೇ ಕಾಣಿಸುತ್ತದೆ.

ಕೂದಲು ಉದುರುವಿಕೆ:

ಒಂದೆರಡು ಕೂದಲು ಉದುರುತ್ತಿದ್ದರೆ ಅದು ಸಮಸ್ಯೆಯಲ್ಲ. ಆದರೆ ಸಾಮಾನ್ಯಕ್ಕಿಂತ ಹೆಚ್ಚು ಕೂದಲು ಉದುರುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಇದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು.

ತೂಕ ಹೆಚ್ಚಾಗುವುದು :

ಹಠಾತ್ ತೂಕ ಹೆಚ್ಚಾಗುವುದು ಕೂಡಾ ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರುತ್ತದೆ. .

ಸುಸ್ತು :

7 ರಿಂದ 8 ಗಂಟೆಗಳ ನಿದ್ದೆ ಮಾಡಿದ ನಂತರವೂ, ಸುಸ್ತು, ಆಲಸ್ಯವಾಗುತ್ತಿದ್ದರೆ, ಅದು ವಿಟಮಿನ್ ಡಿ ಕೊರತೆಯ ಲಕ್ಷಣವೂ ಆಗಿರಬಹುದು.

ಮನಸ್ಥಿತಿಯ ಮೇಲೆ ಪರಿಣಾಮ :

ಮಾತು ಮಾತಿಗೂ ಸಿಟ್ಟು, ಖಿನ್ನತೆಗೆ ಒಳಗಾಗುವುದು, ಸಣ್ಣ ಸಣ್ಣ ವಿಚಾರಗಳಿಗೆ ಅಳುವುದು ಸಹ ವಿಟಮಿನ್ ಡಿ ಕೊರತೆಯ ಸಂಕೇತವಾಗಿರುತ್ತದೆ.

ಕೀಲು ಮತ್ತು ಸ್ನಾಯು ನೋವು :

ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ, ಅದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು. ವಿಟಮಿನ್ ಡಿ ಕೊರತೆಯಿಂದಾಗಿ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗುತ್ತದೆ.

ವಿಟಮಿನ್ ಡಿ ಆಹಾರ :

ಅಣಬೆ, ಮೊಟ್ಟೆ, ಹಾಲು, ಸೋಯಾ ಹಾಲು, ಕಿತ್ತಳೆ ರಸ, ಕೊಬ್ಬಿನ ಅಂಶಗಳಿರುವ ಮೀನು ಇತ್ಯಾದಿಗಳನ್ನು ಸೇವಿಸುವುದರಿನದ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು.

VIEW ALL

Read Next Story