ಪ್ಯೂರಿನ್ ಹೊಂದಿರುವ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಅಂಶ ಹೆಚ್ಚಾಗುತ್ತದೆ.
ಈ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಜನರು ಹಲವಾರು ಔಷಧಿಗಳ ಮೊರೆ ಹೋಗುತ್ತಾರೆ.
ಯಾವುದೇ ಔಷಧಿಗಳಿಲ್ಲದೆ, ಯೂರಿಕ್ ಆಸಿಡ್ ಅನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬಹುದು.
ಕೊತ್ತಂಬರಿ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ, ಇದನ್ನು ಸೇವಿಸುವುದರಿಂದ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬಹುದು.
ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಅಂಶಗಳು ಸಮೃದ್ಧವಾಗಿದೆ. ಇದರಲ್ಲಿ ಚಟ್ನಿ ಮಾಡಿ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಸಿಡ್ ಅಂಶ ಕಡಿಮೆಯಾಗುತ್ತದೆ.
ಕೊತ್ತಂಬರಿ ಸೊಪ್ಪು ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಇದು ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ.
ಕೊತ್ತಂಬರಿ ಸೊಪ್ಪಿನೊಂದಿಗೆ ಪುದಿನಾ, ಶುಂಠಿ, ನಿಂಬೆ ರಸ ಹಾಗೂ ಉಪ್ಪು ಸೇರಿಸಿ ಚಟ್ನಿ ಮಾಡಿ ಸೇವಿಸಿ.
ಈ ರೀತಿ ಹಸಿರು ಚಟ್ನಿ ಮಾಡಿ ಸೇವಿಸುವುದರಿಂದ ದೇಹದಲ್ಲಿರುವ ಯೂರಿಕ್ ಆಸಿಡ್ ಕಡಿಮೆಯಾಗುತ್ತದೆ. ಕಾಲ ಕ್ರಮೇಣ ಇದು ಯೂರಿಕ್ ಆಸಿಡ್‌ನ ಸಮಸ್ಯೆಯನ್ನು ದೇಹದಿಂದ ತೆಗೆದು ಹಾಕುತ್ತದೆ.