ಹೃದಯಾಘಾತ..ಇದು ಇತ್ತೀಚೆಗೆ ಎಲ್ಲರನ್ನು ಕಾಡುತ್ತಿರುವ ಸಮಸ್ಯೆ. ಅನೇಕರು ಈ ಸಮಸ್ಯೆಯಿಂದ ಇತ್ತೀಚೆಗೆ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಹೃದಯಾಘತ ಆಗುವ ಮುಂಚೆ ಹಲವಾರು ಮುನ್ಸೂಚನೆಗಳನ್ನು ನೀಡುತ್ತದೆ, ಇವು ಸಾಮಾನ್ಯ ಎನಿಸಿದರೂ ಕೂಡ, ಇವುಗಳನ್ನು ನಿರ್ಲಕ್ಷಿಸಿದರೆ ಪ್ರಾಣಕ್ಕೆ ಕಂಟಕ.
ಹೃದಯಾಘತದ ಸಾಮಾನ್ಯ ಲಕ್ಷಣಗಳಲ್ಲಿ ಒಂದು ವಾಂತಿಯಾಗುವುದು.
ಹೊಟ್ಟೆ ನೋವು ನಿಮಗೆ ಸಾಮಾನ್ಯವೆನಿಸಬಹುದು, ಆದರೆ ನಿರಂತರವಾದ ಹೊಟ್ಟೆ ನೋವು ಹೃದಯಾಘದ ಲಕ್ಷಣಗಳಲ್ಲಿ ಒಂದು.
ಹೊಟ್ಟೆ ನೋವು, ವಾಂತಿ ಎರಡೂ ಗುಣಲಕ್ಷಣ ಅಥವಾ ಇದರಲ್ಲಿ ಯಾವುದೇ ಒಂದು ರೋಗ ಗುಣಲಕ್ಷಣ ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ನೀವು ಒಂದು ವೇಳೆ ದವಡೆಯ ನೋವಿನಿಂದ ಬಳಲುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇಲ್ಲವಾದಲ್ಲಿ ಇದು ಹೃದಯಾಘಾತಕ್ಕೆ ಕಾರಣವಾಗಬಹುದು.
ಎಸಿ ರೂಂನಲ್ಲಿದ್ದರೂ ಕೂಡ ನೀವು ಬೆವರುತ್ತಿದ್ದರೆ, ಅಥವಾ ನಿರಂತರವಾಗಿ ನೀವು ಬೆವರುತ್ತಿದ್ದರೆ, ಇದು ಹೃದಯಾಘಾತದ ಸೂಚನೆ. ತಕ್ಷಣ ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.