ಹೀಗೆ ಮಾಡಿದರೆ ಮಳೆಗಾಲದಲ್ಲಿ ಆಲೂಗಡ್ಡೆ ಕೆಡುವುದಿಲ್ಲ

ಆಲೂಗಡ್ಡೆ ಶೇಖರಣೆ ಹೀಗಿರಲಿ

ಮಳೆಗಾಲದಲ್ಲಿ ತರಕಾರಿಗಳನ್ನು ಶೇಖರಿಸಿ ಇಟ್ಟುಕೊಳ್ಳುವುದೇ ಒಂದು ಚ್ಯಾಲೆಂಜ್. ಅದು ಕೂಡಾ ನೀರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಬಹಳ ಬೇಗನೆ ಹಾಳಾಗಿ ಬಿಡುತ್ತದೆ.

ಈ ಜಾಗ ಬೇಡ

ಆಲೂಗಡ್ಡೆಯನ್ನು ನೀರಿರುವ ಅಥವಾ ತೇವಾಂಶದಿಂದ ಕೂಡಿದ ಜಾಗದಲ್ಲಿ ಇಡಲೇ ಬಾರದು.

ನೇರ ಬಿಸಿಲೂ ಬೀಳಬಾರದು

ಇನ್ನು ಇದನ್ನು ಹೆಚ್ಚು ಬಿಸಿ ಅಥವಾ ನೇರ ಬಿಸಿಲಿನಲ್ಲಿಯೂ ಇಡಬಾರದು. ಇಲ್ಲವಾದರೆ ಅದು ಹಸಿರು ಬಣ್ಣಕ್ಕೆ ತಿರುಗುತ್ತದೆ.

ತೆರೆದ ಜಾಗ

ಆಲೂಗಡ್ಡೆಯನ್ನು ತೆರೆದ ಜಾಗದಲ್ಲಿ ಇಟ್ಟಷ್ಟು ಅದು ಉತ್ತಮ ಸ್ಥಿತಿಯಲ್ಲಿ ಇರುತ್ತದೆ.

ಸ್ವಚ್ಚಗೊಳಿಸಬೇಕು

ಆಲೂಗಡ್ಡೆ ಯನ್ನು ಸ್ಟೋರ್ ಮಾಡುವ ಮುನ್ನ ಅದನ್ನು ಸರಿಯಾಗಿ ಸ್ವಚ್ಚಗೊಳಿಸಬೇಕು. ಇಲ್ಲವಾದರೆ ಅದು ಬಹಳ ಬೇಗ ಹಾಳಾಗಿ ಬಿಡುತ್ತದೆ.

40 -50 ಡಿಗ್ರಿ

ಆಲೂಗಡ್ಡೆಯನ್ನು 40 -50 ಡಿಗ್ರಿ ಫ್ಯಾರನ್ ಹೈಟ್ ತಾಪಮಾನದಲ್ಲಿ ಇಡಬೇಕು. ಇದೇ ಆಲೂಗಡ್ಡೆ ಸ್ಟೋರ್ ಮಾಡಲು ಇರುವ ಸರಿಯಾದ ತಾಪಮಾನ.

ಫ್ರಿಜ್ ನಲ್ಲಿ ಇಡಬಾರದು

ಆಲೂಗಡ್ಡೆಯನ್ನು ಯಾವತ್ತೂ ಫ್ರಿಜ್ ನಲ್ಲಿ ಇಡಬಾರದು. ಇದರ ರುಚಿ ಕೆಡುತ್ತದೆ.

ಮೊಳಕೆ ಬರುತ್ತದೆ

ಆಲೂಗಡ್ಡೆಯನ್ನು ನೀರಿನಲ್ಲಿ ತೊಳೆದು ಇಟ್ಟರೆ ಅದರಲ್ಲಿ ಮೊಳಕೆ ಬರಲು ಶುರುವಾಗುತ್ತದೆ.

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story