ಮಳೆಗಾಲದಲ್ಲಿರೋಗ ನಿರೋಧಕ ಶಕ್ತಿ ಕಾಪಾಡುವ ದೃಷ್ಟಿಯಿಂದ ಪ್ರೋಟಿನ್ ಭರಿತ ಆಹಾರವನ್ನು ಮಕ್ಕಳಿಗೆ ನೀಡಬೇಕು. ಮೊಟ್ಟೆ, ತುಪ್ಪ, ಪಪ್ಪಾಯ ಇತ್ಯಾದಿಗಳನ್ನು ನೀಡಬೇಕು.
ಮಳೆಗಾಲದಲ್ಲಿ ಮಕ್ಕಳಿಗೆ ತಣ್ಣೀರು ಕುಡಿಸಬೇಡಿ . ಯಾವಾಗಲೂ ಉಗುರು ಬೆಚ್ಚಗಿರುವ ನೀರನ್ನೇ ಕುಡಿಯಲು ಕೊಡಿ.
ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೀಟಾಣುಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ಏನೇ ತಿನ್ನುವುದಕ್ಕೂ ಮೊದಲು ಕೈಯನ್ನು ಚೆನ್ನಾಗಿ ಸೋಪು ಹಾಕಿ ತೊಳೆಯುವ ಅಭ್ಯಾಸ ಮಾಡಿಸಿಕೊಳ್ಳಿ.
ಮಳೆಗಾಲದಲ್ಲಿ ಮಕ್ಕಳಿಗೆ ಹೆಚ್ಚು ಆರಾಮದಾಯಕವಾಗಿರುವ ಬಟ್ಟೆಯನ್ನೇ ಹಾಕಲು ನೀಡಿ. ಹಾಗೆಯೇ ಬೇಗನೆ ಒಣಗಲು ಸಾಧ್ಯವಾಗುವ ಬಟ್ಟೆಯನ್ನೇ ನೀಡಿ.
ಶುಚಿತ್ವದ ಬಗ್ಗೆ ಹೆಚ್ಚು ಗಮನ ನೀಡಿ. ಮನೆಯ ಸುತ್ತ ಮುತ್ತ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಿ.
ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಬೇಕಾದರೆ ಮುಖ್ಯವಾಗಿ ವಿಟಮಿನ್ ಸಿಯುಕ್ತ ಆಹಾರ ನೀಡಿ.
ಮಳೆಗಾಲದಲ್ಲಿ ಕಾಳು ಮೆಣಸಿನ ಪುಡಿಯ ಜೊತೆ ಜೇನು ತುಪ್ಪ ನೀಡಿ. ಇದರಿಂದ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ, ಶುಂಟಿ ಮುಂತಾದವುಗಳನ್ನು ತಿನ್ನಿಸಿ.
ಮಳೆಗಾಲದಲ್ಲಿ ಮಕ್ಕಳ ದೈಹಿಕ ಚಟುವಟಿಕೆಯನ್ನು ನಿಲ್ಲಿಸಬೇಡಿ. ಮಳೆಗಾಲದಲ್ಲೂ ಮಕ್ಕಳು ಆಕ್ಟಿವ್ ಆಗಿರಬೇಕು.
ಮಳೆಗಾಲದಲ್ಲಿ ಮಕ್ಕಳಿಗೆ ತಣ್ಣನೆಯ ಮತ್ತು ಅರ್ಧ ಬೆಂದ ಆಹಾರವನ್ನು ಎಂದಿಗೂ ನೀಡಬೇಡಿ.