ಕೂದಲು ದಷ್ಟಪುಷ್ಟವಾಗಿ ಬೆಳೆಯಲು ಮಜ್ಜಿಗೆಯನ್ನು ಹೀಗೆ ಬಳಸಿ

Bhavishya Shetty
Feb 07,2024

ಆರೈಕೆ

ಕೂದಲಿಗೆ ಸರಿಯಾದ ಆರೈಕೆಯ ಅಗತ್ಯವಿರುತ್ತದೆ. ಕೂದಲು ವಿಪರೀತವಾಗಿ ಉದುರಲು ಪ್ರಾರಂಭಿಸಿದಾಗ, ಶಾಂಪೂ, ಕೆಲವೊಮ್ಮೆ ರಾಸಾಯನಿಕ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಕೆಲವರು ಯೋಚಿಸುತ್ತಾರೆ. ಆದರೆ ಕೂದಲಿನ ಸೌಂದರ್ಯ ಮತ್ತು ಆರೋಗ್ಯದ ಮೇಲೆ ಕಠಿಣ ಪರಿಣಾಮ ಬೀರುತ್ತದೆ.

ಮನೆಮದ್ದು

ಆದರೆ ಮನೆಮದ್ದುಗಳನ್ನು ಬಳಸಬಹುದು. ಇದು ನೈಸರ್ಗಿಕವಾಗಿ ಕೂದಲಿಗೆ ಪೋಷಣೆ ನೀಡುತ್ತದೆ. ಅಂತಹ ಮನೆಮದ್ದುಗಳಲ್ಲಿ ಮಜ್ಜಿಗೆ ಕೂಡ ಒಂದು. ಮಜ್ಜಿಗೆ ಕೂದಲಿಗೆ ಪೋಷಣೆ ನೀಡುವುದಲ್ಲದೆ, ದಟ್ಟವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಕೂದಲಿಗೆ ಪೋಷಣೆ

ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲ ಮತ್ತು ವಿಟಮಿನ್ ಎ ಕೂದಲಿಗೆ ತುಂಬಾ ಪ್ರಯೋಜನಕಾರಿ. ನಿಂಬೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಕೂಡ ಇದೆ. ಆದ್ದರಿಂದ ಇವೆರೆಡ ಮಿಶ್ರಣ ನಿಮ್ಮ ಕೂದಲನ್ನು ಒಳಗಿನಿಂದ ಪೋಷಿಸಲು ಸಹಾಯ ಮಾಡುತ್ತದೆ.

ಕೂದಲಿನ ಬೇರುಗಳಿಗೆ…

ಈ ಪ್ಯಾಕ್ ಅನ್ನು ಹತ್ತಿಯ ಸಹಾಯದಿಂದ ಕೂದಲಿನ ಬೇರುಗಳ ಮೇಲೆ ಹಚ್ಚಿ. 30-45 ನಿಮಿಷಗಳ ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. ಹೀಗೆ ವಾರಕ್ಕೆ 2 ರಿಂದ 3 ಬಾರಿ ಈ ಟಿಪ್ಸ್ ಫಾಲೋ ಮಾಡಿದರೆ ಒಳಿತು.

ಹೇರ್ ಮಾಸ್ಕ್

ಕೂದಲು ಆರೋಗ್ಯವಾಗಿರಲು ಮಜ್ಜಿಗೆಯನ್ನು ಹೇರ್ ಮಾಸ್ಕ್ ಆಗಿಯೂ ಬಳಸಬಹುದು. ಇದಕ್ಕಾಗಿ ಒಂದು ಲೋಟ ಮಜ್ಜಿಗೆ ತೆಗೆದುಕೊಳ್ಳಿ. 3 ಚಮಚ ಆಲಿವ್ ಎಣ್ಣೆ ಮತ್ತು ಒಂದು ಮೊಟ್ಟೆಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಅದಕ್ಕೆ ಬಾಳೆಹಣ್ಣನ್ನು ಕೂಡ ಮಿಶ್ರಣ ಮಾಡಬಹುದು. ಈಗ ಇದನ್ನು ಕೂದಲಿಗೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ.

ಗುಣಮಟ್ಟ

ಕೂದಲಿನ ಗುಣಮಟ್ಟವನ್ನು ಸುಧಾರಿಸಲು ವಾರಕ್ಕೊಮ್ಮೆ ಈ ಹೇರ್ ಮಾಸ್ಕ್ ಅನ್ನು ಬಳಸಿದರೆ ಸಾಕು.

ಸೂಚನೆ:

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story