ರಾತ್ರಿ ಹೊತ್ತು ಕಾಣಿಸಿಕೊಳ್ಳುವ ಈ ಸಮಸ್ಯೆಗಳು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು !
ಅಧಿಕ ಕೊಲೆಸ್ಟ್ರಾಲ್ ಕಾರಣದಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಂತಹ ಸಮಸ್ಯೆಗಳು ಎದುರಾಗಬಹುದು. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಹಲವು ರೀತಿಯ ಲಕ್ಷಣಗಳು ಕಂಡುಬರುತ್ತವೆ.
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ರಾತ್ರಿಯಲ್ಲೂ ಹಲವು ಲಕ್ಷಣಗಳು ಕಂಡುಬರುತ್ತವೆ. ಈ ರೋಗಲಕ್ಷಣಗಳನ್ನು ಎದುರಿಸುತ್ತಿದ್ದರೆ ಜಾಗರೂಕರಾಗಿರಬೇಕು.
ಆಯಾಸ ಮತ್ತು ದೌರ್ಬಲ್ಯದಿಂದಾಗಿ ಉಸಿರಾಟದ ತೊಂದರೆ ಸಾಮಾನ್ಯವಾಗಿದೆ. ಆದರೆ ರಾತ್ರಿ ಮಲಗಿದಾಗ ನೀವು ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಅನುಭವಿಸಲು ಪ್ರಾರಂಭಿಸಿದರೆ, ಅದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದ ಸಂಕೇತವಾಗಿದೆ.
ರಾತ್ರಿಯ ಹೊತ್ತು ಹಠಾತ್ತನೆ ಪಾದಗಳು ಉರಿಯಲು ಪ್ರಾರಂಭಿಸುತ್ತಿದ್ದರೆ ಅದು ಅಧಿಕ ಕೊಲೆಸ್ಟ್ರಾಲ್‌ನ ಸಂಕೇತ.
ಅಧಿಕ ಕೊಲೆಸ್ಟ್ರಾಲ್ ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವಿಕೆಗೆ ಕಾರಣವಾಗಬಹುದು.
ರಾತ್ರಿ ನಿದ್ದೆ ಮಾಡುವಾಗ ನೀವು ಪದೇ ಪದೇ ಎದೆ ನೋವಿನಿಂದ ಬಳಲುತ್ತಿದ್ದರೆ ಅದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಳದ ಸಂಕೇತ. ನೀವು ವೈದ್ಯರನ್ನು ಸಂಪರ್ಕಿಸಬೇಕು.
ರಾತ್ರಿ ಮಲಗುವ ಮುನ್ನ ನಿಮ್ಮ ಪಾದದ ಅಡಿಭಾಗವು ಮಂಜುಗಡ್ಡೆಯಂತೆ ತಣ್ಣಗಾಗಿದ್ದರೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆ ಎಂದು ಅರ್ಥಮಾಡಿಕೊಳ್ಳಿ.
ಈ ರೋಗಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ ಕೂಡಲೇ ಕೊಲೆಸ್ಟ್ರಾಲ್ ಟೆಸ್ಟ್ ಮಾಡಿಸಿ ಮತ್ತು ಅದನ್ನು ನಿಯಂತ್ರಿಸಲು ಪ್ರಯತ್ನಿಸಿ.
ಸೂಚನೆ: ಇದು ಸಾಮಾನ್ಯ ಮಾಹಿತಿಯಾಗಿದೆ. ಹೆಚ್ಚಿನ ವಿವರಣೆಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದಕ್ಕೆ ಯಾವುದೇ ರೀತಿಯಲ್ಲೂ ಹೊಣೆಯಲ್ಲ.