ಚಳಿಗಾಲದಲ್ಲಿ ಇವುಗಳನ್ನು ಸೇವಿಸಿದರೆ ಬೆಣ್ಣೆಯಂತೆ ಕರಗುತ್ತೆ ಡೊಳ್ಳು ಹೊಟ್ಟೆ..!

Yashaswini V
Dec 18,2024

ತೂಕ ಇಳಿಕೆ

ತೂಕ ಇಳಿಕೆಯೇ ಕಷ್ಟ... ಅದರಲ್ಲಿ ಚಳಿಗಾಲದಲ್ಲಿ ತೂಕ ಇಳಿಕೆ ಬಗ್ಗೆ ಯೋಚಿಸುವುದು ಸಹ ಅಸಾಧ್ಯ ಎನ್ನುವ ಮಂದಿಗೆ ಇಲ್ಲಿದೆ ಸುಲಭ ಪರಿಹಾರ.

ಚೆನ್ನಾಗಿ ತಿಂದು ತೂಕ ಇಳಿಸಿ

ಚಳಿಗಾಲದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಹಸಿವಾಗುತ್ತದೆ. ಈ ಸಮಯದಲ್ಲಿ ಡಯಟ್ ಮಾಡಿಯಲ್ಲ ಚೆನ್ನಾಗಿ ತಿಂದು ತೂಕ ಇಳಿಸಬಹುದು. ಹಾಗಂತ ರುಚಿ ರುಚಿಯಾದ ಎಣ್ಣೆಯಲ್ಲಿ ಕರಿದ ತಿಂಡಿ-ತಿನಿಸುಗಳನ್ನು ತಿನ್ನುವಂತಿಲ್ಲ.

ಚಳಿಗಾಲದಲ್ಲಿ ತೂಕ ಇಳಿಕೆ ಆಹಾರ

ಆಹಾರ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಕೆಲವು ಹಣ್ಣು-ತರಕಾರಿಗಳನ್ನು ತಿನ್ನುವುದರ ಮೂಲಕ ತ್ವರಿತವಾಗಿ ತೂಕ ಇಳಿಸಬಹುದು.

ಹಸಿರು ಸೊಪ್ಪು

ತಾಜಾ ಹಸಿರು ಸೊಪ್ಪುಗಳಲ್ಲಿ ಜೀವಸತ್ವಗಳು, ಖನಿಜಗಳು ಸಮೃದ್ಧವಾಗಿರುತ್ತವೆ. ಕಡಿಮೆ ಕ್ಯಾಲೋರಿ ಹೊಂದಿರುವ ಈ ಆಹಾರದಲ್ಲಿ ದೇಹಕ್ಕೆ ಅಗತ್ಯ ಪೋಷಕಾಂಶಗಳು ಲಭ್ಯವಿವೆ. ಇದರಿಂದ ತೂಕ ನಿರ್ವಹಣೆ ಸುಲಭವಾಗುತ್ತದೆ.

ಬೇರಿನ ತರಕಾರಿಗಳು

ಚಳಿಗಾಲದಲ್ಲಿ ಫೈಬರ್ ಮತ್ತು ಆಂಟಿಆಕ್ಸಿಡೆಂಟ್ಗಳಲ್ಲಿ ಹೇರಳವಾಗಿರುವ ಬೀಟ್ರೂಟ್, ಕ್ಯಾರೆಟ್, ಮೂಲಂಗಿಯಂತಹ ಬೇರಿನ ತರಕಾರಿಗಳ ಸೇವನೆಯಿಂದ ತ್ವರಿತವಾಗಿ ತೂಕ ಇಳಿಕೆ ಮಾಡಬಹುದು.

ಅರಿಶಿನ, ಶುಂಠಿ, ಬೆಳ್ಳುಳ್ಳಿ

ಚಳಿಗಾಲದಲ್ಲಿ ಅರಿಶಿನ, ಶುಂಠಿ, ಬೆಳ್ಳುಳ್ಳಿ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ತ್ವರಿತ ತೂಕ ಇಳಿಕೆಗೆ ವರದಾನವಿದ್ದಂತೆ.

ಸಿಟ್ರಸ್ ಹಣ್ಣುಗಳು

ಚಳಿಗಾಲದಲ್ಲಿ ಕಿತ್ತಳೆ, ನಿಂಬೆಹಣ್ಣು, ದ್ರಾಕ್ಷಿಯಂತಹ ವಿಟಮಿನ್ ಸಿ ಹೇರಳವಾಗಿರುವ ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ಚಯಾಪಚಯ ಹೆಚ್ಚಾಗಿ ಹೊಟ್ಟೆಯ ಕೊಬ್ಬು ಕರಗುತ್ತದೆ.

ಬೆರ್ರಿ ಹಣ್ಣುಗಳು

ಚಳಿಗಾಲದಲ್ಲಿ ಫೈಬರ್ ಸಮೃದ್ಧ ಹಣ್ಣುಗಳಾದ ಬೆರ್ರಿ ಹಣ್ಣುಗಳನ್ನು ತಿನ್ನುವುದರಿಂದ ಇದರ ಜೊತೆಗೆ ಪೇರಳೆ ಹಣ್ಣಿನ ಸೇವನೆಯಿಂದ ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story