ಸ್ನಾನ ಮುಗಿದ ನಂತರ ಟವಲ್ ಅನ್ನು ಸುತ್ತಿಕೊಂಡು ಹೊರ ಬರುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ ಈ ಅಭ್ಯಾಸ ನಿಮ್ಮನ್ನು ರೋಗಗಳ ಬಾಯಿಗೆ ದೂಡಿಬಿಡಬಹುದು.
ಸ್ನಾನ ಮಾಡಿ ರೋಗಗಳನ್ನು ದೂರ ತಳ್ಳಬಹುದು ಎಂದು ನಾವಂದು ಕೊಂಡಿದ್ದರೆ,ಸ್ನಾನದ ನಂತರ ಸುತ್ತಿಕೊಳ್ಳುವ ಟವಲ್ ರೋಗಗಳ ಬಾಯಿಗೆ ನಮ್ಮನ್ನು ದೂಡಿ ಬಿಡಬಹುದು.
ಸ್ನಾನ ಮುಗಿಸಿಕೊಂಡು ಹೊರ ಬರುವಾಗ ಟವಲ್ ಅನ್ನು ದೇಹಕ್ಕೆ ಅಥವಾ ಕೂದಲಿಗೆ ಸುತ್ತಿಕೊಂಡು ಬರುವ ಅಭ್ಯಾಸ ಬಹುತೇಕ ಮಂದಿಗೆ ಇರುತ್ತದೆ.ಆದರೆ ಇದು ಅಪಾಯಕಾರಿ ಎನ್ನುವುದು ಸಂಶೋಧನೆಗಳಿಂದ ಹೊರ ಬಂದಿರುವ ಸತ್ಯ.
ನಿತ್ಯ ಧರಿಸುವ ಬಟ್ಟೆಗಳನ್ನು ತೊಳೆಯುವಂತೆ ಸಾಮಾನ್ಯವಾಗಿ ಟವಲ್ ಗಳನ್ನು ಪ್ರತಿ ದಿನ ಒಗೆಯುವುದಿಲ್ಲ.ಇದರಿಂದಾಗಿ ಟವಲ್ ನಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ.ಈ ಬ್ಯಾಕ್ಟೀರಿಯಾಗಳು ರೋಗಗಳನ್ನು ಹರಡುತ್ತದೆ.
ಈ ಬ್ಯಾಕ್ಟೀರಿಯಾಗಳು ಅತಿಸಾರ ಮತ್ತು ಫುಡ್ ಪೋಯಿಸನ್ ನಂಥಹ ಕಾಯಿಲೆಗಳಿಗೆ ಕಾರಣವಾಗಬಹುದು.
ಸ್ನಾನ ಮಾಡುವಾಗಲೆಲ್ಲಾ ದೇಹವನ್ನು ಒರೆಸಿದ ನಂತರ ಟವೆಲ್ ಒದ್ದೆಯಾಗುತ್ತದೆ. ಹಾಗಾಗಿ ಟವಲ್ ನಲ್ಲಿ ತೇವಾಂಶವು ದೀರ್ಘಕಾಲದವರೆಗೆ ಉಳಿಯುತ್ತದೆ.ಇದು ಟವಲ್ ನಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ.
ಟವೆಲ್ ಮೂಲಕ ಹರಡುವ ರೋಗಗಳನ್ನು ತಪ್ಪಿಸಬೇಕಾದರೆ ಅದನ್ನು ಆಗಾಗ ಸರಿಯಾಗಿ ಒಗೆಯಬೇಕು.ಹೀಗೆ ಮಾಡಿದಾಗ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ.
ಪ್ರತಿ ಬಾರಿ ಸ್ನಾನದ ನಂತರ ಟವೆಲ್ ನಿಂದ ಮೈ ಅಥವಾ ಕೂದಲು ಒರೆಸಿದ ನಂತರ ಟವಲ್ ಅನ್ನು ಬಿಸಿಲಿನಲ್ಲಿ ಒಣಗಲು ಹಾಕಬೇಕು. ಹೀಗಾದಾಗ ಸೂರ್ಯನ ಶಾಖಕ್ಕೆ ಟವಲ್ ನಲ್ಲಿರುವ ತೇವಾಂಶ ಒಣಗಿ ಹೋಗುತ್ತದೆ.ರೋಗಾಣುಗಳು ಹುಟ್ಟಿಕೊಳ್ಳುವುದಿಲ್ಲ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ZEE NEWS ಅದನ್ನು ಖಚಿತಪಡಿಸುವುದಿಲ್ಲ.