ವಾಹನಗಳಿಗೆ ನಂಬರ್ ಪ್ಲೇಟ್‌ಗಳನ್ನು ನೀಡುವಂತಹ ಜವಾಬ್ದಾರಿಯನ್ನು RTO (ಪ್ರಾದೇಶಿಕ ಸಾರಿಗೆ ಕಚೇರಿ) ಹೊಂದಿದ್ದು,ಆಯಾ ವಾಹನಗಳು ನೋಂದಣಿ ಸಂಖ್ಯೆಯನ್ನು ಹೊಂದುವುದು ಬಹಳ ಮುಖ್ಯವಾಗಿರುತ್ತದೆ.

Zee Kannada News Desk
Feb 15,2024

ಹಸಿರು ಬಣ್ಣ

ವಿದ್ಯುತ್ ಚಾಲಿತ ವಾಹನಕ್ಕೆ ಹಸಿರು ಬಣ್ಣದ ನಂಬರ್‌ ಪ್ಲೇಟ್ ಅನ್ನು ಅಳವಡಿಸಿರುತ್ತಾರೆ.ವಿದ್ಯುತ್ ಚಾಲಿತ ವಾಹನವನ್ನು ಬಳಸುವುದರಿಂದ ಪರಿಸರ ಮಾಲಿನ್ಯಕ್ಕೆ ತೊಂದರೆಯಾಗುವುದನ್ನು ತಪ್ಪಿಸಬಹುದು.

ಹಳದಿ ಬಣ್ಣ

ಹಳದಿ ಬಣ್ಣದ ಫಲಕದಲ್ಲಿರುವ ಕಪ್ಪು ಬಣ್ಣದ ಅಕ್ಷರಗಳೊಂದಿಗೆ ಸಂಖ್ಯೆಯನ್ನು ಹೊಂದಿದ್ದು,ಈ ವಾಹನಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಾರೆ.

ಬಿಳಿ ಬಣ್ಣ

ಭಾರತದಲ್ಲಿ ಸಾಮನ್ಯವಾಗಿ ಬಿಳಿ ಬಣ್ಣದ ಫಲಕದಲ್ಲಿಯೂ ಕಪ್ಪು ಬಣ್ಣ ಅಕ್ಷರಗಳೊಂದಿಗೆ ಸಂಖ್ಯೆಯನ್ನು ನಮೂದಿಸಿದ್ದು ಈ ವಾಹನವನ್ನು ವೈಯಕ್ತಿಕ ಕೆಲಸ ಕಾರ್ಯಗಳಿಗೆ ಉಪಯೋಗಿಸುತ್ತಾರೆ.

ಕೆಂಪು ಬಣ್ಣ

ಆಯಾ RTO ಕಚೇರಿಯು ಶಾಶ್ವತವಾದ ನಂಬರ್‌ ಪ್ಲೇಟ್‌ ನೀಡುವವರೆಗು ತಾತ್ಕಲಿಕವಾದ ಕೆಂಪು ಬಣ್ಣ ಸೂಚಿಸಿರುವ ನೋಂದಣಿ ಸಂಖ್ಯೆಯನ್ನು ಕೊಟ್ಟಿರುತ್ತಾರೆ.ಇದು 1 ತಿಂಗಳವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.

ನೀಲಿ ಬಣ್ಣ

ವಿದೇಶದಿಂದ ಭಾರತಕ್ಕೆ ಬಂದಿರುವಂತಹ ವಾಹನಗಳಿಗೆ ನೀಲಿ ಬಣ್ಣದ ಫಲಕದಲ್ಲಿ ಬಿಳಿ ಅಕ್ಷರಗಳೊಂದಿಗೆ ಸಂಖ್ಯೆಯನ್ನು ನೋಂದಣಿ ಮಾಡಿರುತ್ತಾರೆ.ಈ ವಾಹನಗಳು ಭಾರತದಲ್ಲಿ ರಾಯಭಾರ ನಡೆಸುತ್ತಿರುವ ಕಚೇರಿಗಳಿಗೆ ಸೇರಿರುತ್ತವೆ.

ಕಪ್ಪು ಬಣ್ಣ

ಕಪ್ಪು ಬಣ್ಣದ ನಂಬರ್‌ ಪ್ಲೇಟ್‌ ಅನ್ನು ಹೊಂದಿರುವಂತಹ ವಾಹನಗಳು ಬಾಡಿಗೆಯ ರೂಪದಲ್ಲಿ ಜನರಿಗೆ ಸಹಾಯ ಮಾಡಲು ಚಾಲ್ತಿಯಲ್ಲಿರುತ್ತದೆ.

ಬಾಣದ ಗುರುತು

ನೋಂದಣಿ ಫಲಕದಲ್ಲಿ ಮೇಲ್ಮುಖವಾಗಿ ಬಾಣದ ಗುರುತಿನಲ್ಲಿ ಸೂಚಿಸಿದ್ದರೆ ಅಂತಹ ವಾಹನಗಳನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿರುವಂತಹ ಅಧಿಕಾರಿಗಳು ಉಪಯೋಗಿಸುತ್ತಾರೆ.

ಲಾಂಛನದ ಚಿಹ್ನೆ

ವಿಶೇಷವಾಗಿ ಕೆಂಪು ಬಣ್ಣದ ನಂಬರ್‌ ಪ್ಲೇಟ್‌ ನಲ್ಲಿ ರಾಷ್ಟ್ರ ಲಾಂಛನವನ್ನು ಹೊಂದಿರುತ್ತದೆ. ಈ ವಾಹನವನ್ನು ಸರ್ಕಾರಿ ಅಧಿಕಾರಿಗಳು,ರಾಜ್ಯಪಾಲರು,ಭಾರತದ ರಾಷ್ಟ್ರಪತಿಗಳು ಉಪಯೋಗಿಸುತ್ತಾರೆ.

VIEW ALL

Read Next Story