ಪುದೀನ ಎಲೆಗಳನ್ನು ನಿಯಮಿತವಾಗಿ ತಿನ್ನುವುದರಿಂದ ಚರ್ಮವು ಹೈಡ್ರೇಟ್ ಆಗುತ್ತದೆ.
ಮೊಡವೆಗಳಿಂದ ಪರಿಹಾರ ಪಡೆಯಲು ನಿಂಬೆರಸ ಮತ್ತು ಪುದೀನಾ ಪೇಸ್ಟ್ ಅನ್ನು ಒಟ್ಟಿಗೆ ಹಚ್ಚಿದರೆ ಸಮಸ್ಯೆ ನಿವಾರಣೆಯಾಗುತ್ತದೆ.
ಪುದೀನಾವನ್ನು ಪೇಸ್ಟ್ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಈಗೇ ಮಾಡುವುದರಿಂದ ನಿಮ್ಮ ಅಂದ ಹೆಚ್ಚುತ್ತದೆ.
ಎಣ್ಣೆಯುಕ್ತ ಚರ್ಮದ ಸಮಸ್ಯೆ ಇರುವವರಿಗೆ ಈ ಫೇಸ್ ಪ್ಯಾಕ್ ಬೆಸ್ಟ್. ಜಿಡ್ಡಿನಂಶ ಕಡಿಮೆಯಾಗಿ ಚರ್ಮ ಕಾಂತಿಯುತವಾಗಿ ಕಾಣುತ್ತದೆ.
ಪುದೀನಾ ಮತ್ತು ಸೌತೆಕಾಯಿಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖ ತಂಪಾಗುತ್ತದೆ. ಈ ಪ್ಯಾಕ್ ಬೇಸಿಗೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.