ಭಾರತೀಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS 2005–06) ಪ್ರಕಾರ ಶೇ.75 ರಷ್ಟು ಭಾರತೀಯರು ಸಸ್ಯಾಹಾರಿಗಳಲ್ಲ. 2015–16 NFHS ಸಮೀಕ್ಷೆಯ ಪ್ರಕಾರ, ಈ ಸಂಖ್ಯೆಯಲ್ಲಿ ಶೇ,78ರಷ್ಟು ಮಹಿಳೆಯರಿದ್ದರೆ, ಪುರುಷರು ಶೇ.70ರಷ್ಟಿದ್ದಾರೆ.
ಹಾಗಾದ್ರೆ ಭಾರತ ದೇಶದಲ್ಲಿ ಮಾಂಸಕ್ಕಾಗಿ ಹೆಚ್ಚು ಕೊಲ್ಲಲ್ಪಡುವ ಜೀವಿ ಯಾವುದೆಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ 2021ರಲ್ಲಿ ನೀಡಿದ ವರದಿಯ ಆಧಾರದ ಮೇಲೆ ಭಾರತದಲ್ಲಿ ಮಾಂಸಕ್ಕಾಗಿ ಹೆಚ್ಚಾಗಿ ಕೊಲ್ಲಲ್ಪಡುವ 6 ಜೀವಿಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಈ ಪಟ್ಟಿಯಲ್ಲಿ ಕೋಳಿ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಅತೀ ಹೆಚ್ಚಿನ ಜನರು ಮಾಂಸಾಹಾರ ತಿಂದರೂ ಕೂಡ ಅದರಲ್ಲಿ ಆಯ್ಕೆಗೆ ಅನುಸಾರ ಸೇವಿಸುತ್ತಾರೆ. ಉದಾಹರಣೆಗೆ ಅನೇಕರು ಕೇವಲ ಕೋಳಿಯನ್ನು ಮಾತ್ರ ಸೇವಿಸುತ್ತಾರೆ . ಮೀನು, ಕುರಿ ಸೇರಿದಂತೆ ಇತರ ಮಾಂಸಾಹಾರ ಸೇವಿಸುವುದಿಲ್ಲ. ಇನ್ನು 273 ಕೋಟಿ ಕೋಳಿಗಳನ್ನು ಭಾರತದಲ್ಲಿ ಮಾಂಸಕ್ಕಾಗಿ ಬಳಸಿಕೊಳ್ಳಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ
ಈ ಪಟ್ಟಿಯಲ್ಲಿ ಆಡುಗಳು ಎರಡನೇ ಸ್ಥಾನದಲ್ಲಿದೆ. 2021ರ ಅಂದಾಜಿನ ಪ್ರಕಾರ ವರ್ಷವೊಂದರಲ್ಲಿ 5.74 ಕೋಟಿ ಕುರಿಗಳನ್ನು ಮಾಂಸಕ್ಕಾಗಿ ಕೊಲ್ಲಲಾಗಿದೆ.
ಗೋಮಾಂಸ ನಿಷೇಧ ಎಂದರೂ ಭಾರತದಲ್ಲಿ ಹೇಳಿದರೂ ಅನೇಕ ಮಂದಿ ಗೋಮಾಂಸ ತಿನ್ನುತ್ತಾರೆ. ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ಸುಮಾರು 4.73 ಕೋಟಿ ಗೋವನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತದೆ ಎಂದು ವರದಿ ಹೇಳಿದೆ
ದೇಶದಲ್ಲಿ ಕೇವಲ ಕೋಳಿಯಲ್ಲ,,, ಬಾತುಕೋಳಿಯನ್ನೂ ಸಹ ಸೇವಿಸುತ್ತಾರೆ. ವರದಿಯ ಪ್ರಕಾರ 3.38 ಕೋಟಿ ಬಾತುಕೋಳಿಯನ್ನು ಮಾಂಸಕ್ಕಾಗಿ ಬಳಸಲಾಗುತ್ತದೆ.
ಇನ್ನು ಶೀಪ್ (ಕುರಿ) ಯನ್ನು ಸಹ ಮಾಂಸಕ್ಕಾಗಿ ಬಳಸಲಾಗುತ್ತದೆ. ಅಂದಾಜು 2.30 ಕೋಟಿ ಕುರಿಗಳನ್ನು ಮಾಂಸಕ್ಕಾಗಿ ಬಳಸುತ್ತಾರೆ ಎಂದು ಹೇಳಲಾಗಿದೆ.
ದೇಶದಲ್ಲಿ ಹಂದಿ ತಿನ್ನುವವರ ಪ್ರಮಾಣ ಕೂಡ ಹೆಚ್ಚಿದೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ 91.5 ಲಕ್ಷ ಹಂದಿಗಳನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತದೆ.