ಕರ್ಲಿ ಅಥವಾ ಗುಂಗುರು ಕೂದಲು ಆರೈಕೆ ಮಾಡುವುದು ತುಂಬಾ ಕಷ್ಟ. ಇತರ ಕೂದಲಿಗೆ ಹೋಲಿಸಿದರೆ ಗುಂಗುರು ಕೂದಲಿನ ಆರೈಕೆಗೆ ಹೆಚ್ಚು ಕಾಳಜಿ ವಹಿಸಬೇಕು.
ಗುಂಗುರು ಕೂದಲು ಹೊಂದಿರುವವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗುಂಗುರು ಕೂದಲು ಶುಷ್ಕ, ಒಣ ಮತ್ತು ನಾಜೂಕಾಗಿರುತ್ತದೆ. ಇದರ ಆರೈಕೆ ಹೇಳಿಕೊಳ್ಳುವಷ್ಟು ಸುಲಭವಲ್ಲ.
ಗುಂಗುರು ಕೂದಲಿನ ಸಮಸ್ಯೆ ನಿವಾರಣೆಯಲ್ಲಿ ಶಾಂಪೂ ಮಹತ್ವದ ಪಾತ್ರ ವಹಿಸುತ್ತದೆ. ಇದಕ್ಕಾಗಿ ಸರಿಯಾದ ಶಾಂಪೂ ಆಯ್ಕೆ ಬಹಳ ಮುಖ್ಯ. ಸಲ್ಫೇಟ್ ಫ್ರೀ ಶಾಂಪೂ ಬಳಸಿದರೆ ಒಳ್ಳೆಯದು.
ಗುಂಗುರು ಕೂದಲನ್ನು ಬ್ರಷ್ ಮಾಡಬಾರದು. ಸ್ನಾನಕ್ಕೆ ಮೊದಲು ಅಗಲವಾದ ಬಾಚಣಿಕೆ ಸಹಾಯದಿಂದ ಬಾಚಿಕೊಳ್ಳಿ. ಸ್ನಾನದ ಬಳಿಕ ಕೈಯಿಂದಲೇ ಕೂದಲನ್ನು ಸರಿಮಾಡಿಕೊಳ್ಳಬೇಕು.
ಗುಂಗುರು ಕೂದಲಿಗೆ ಸಾಮಾನ್ಯ ಕೂದಲಿಗಿಂತ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಹಾಗಾಗಿ ಶಾಂಪೂ ಬಳಿಕ ಕಂಡೀಷನರ್ ಹಾಕಲೇ ಬೇಕು.
ಗುಂಗುರು ಕೂದಲಿಗೆ ಪದೇ ಪದೇ ಸ್ನಾನ ಮಾಡಬಾರದು. ಇಲ್ಲವಾದರೆ ಅದು ಮತ್ತಷ್ಟು ಫ್ರೀಜಿಯಾಗುತ್ತದೆ.
ಗುಂಗುರು ಕೂದಲಿಗೆ ಅಗಲವಾದ ಬಾಚಣಿಕೆಯನ್ನು ಬಳಸಬಹುದು. ಸಾಮಾನ್ಯ ಬಾಚಣಿಕೆಯಿಂದ ಕೂದಲು ಉದುರುವ ಸಮಸ್ಯೆ ಹೆಚ್ಚು.
ಗುಂಗುರು ಕೂದಲು ಇರಲಿ ಅಥವಾ ಸಾಮಾನ್ಯ ಕೂದಲಿರಲಿ ಕೂದಲು ತೊಳೆಯಲು ಯಾವಾಗಲೂ ತಣ್ಣೀರನ್ನೇ ಬಳಸಿ.
ನೀವು ಕೂಡಾ ಗುಂಗುರು ಕೂದಲು ಹೊಂದಿದ್ದರೆ ಆರೈಕೆಗೆ ಇ ಹಂತಗಳನ್ನು ಅನುಸರಿಸಿ.