ಮಹಿಳೆಯರು ಹೆಚ್ಚಾಗಿ ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಅಂತಹ ಅನೇಕ ಕೆಲಸಗಳಿವೆ, ಅದನ್ನು ಮಾಡಲು ಸ್ವಲ್ಪ ಕಷ್ಟ.
ಮನೆಯಲ್ಲಿನ ಚಾಕು ತೀಕ್ಷ್ಣವಾಗಿಲ್ಲವಾದರೆ ಕಲ್ಲಿನ ಸಹಾಯದಿಂದ ಸುಲಭವಾಗಿ ಹರಿತಗೊಳಿಸಬಹುದು .
ಅಡುಗೆಗೆ ರಾಜ್ಮಾವನ್ನು ನೆನೆ ಹಾಕಲು ಮರೆತಿದ್ದರೆ ಕುಕ್ಕರ್ ನಲ್ಲಿ ಸೀಟಿ ಕೂಗಿಸಿ. ನಂತರ ಮತ್ತೆ ಐಸ್ ಕ್ಯೂಬ್ ಗಳನ್ನು ರಾಜ್ಮಾ ಮೇಲೆ ಹಾಕಿ ಮತ್ತೆ ಕುಕ್ಕರ್ ನಲ್ಲಿ ಬೇಯಿಸಿ.
ಉಪ್ಪಿನ ಜಾರ್ ನಲ್ಲಿ ನೀರು ಸೇರಿಕೊಂಡಿದ್ದರೆ ಅದನ್ನು ತೆಗೆದುಹಾಕಲು ಜಾರ್ ಗೆ ಅಕ್ಕಿ ಧಾನ್ಯಗಳನ್ನು ಹಾಕಿ.
ಕುಕ್ಕರ್ ನಿಂದ ನೀರು ಹೊರಗೆ ಬರುತ್ತಿದ್ದರೆ ಬೇಳೆ ಬೇಯಿಸುವಾಗ ಚಿಕ್ಕ ಸ್ಟೀಲ್ ಬೌಲ್ ಅನ್ನು ಅದರೊಳಗೆ ಹಾಕಿ.
ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಭವಾಗಿ ತೆಗೆಯಬೇಕಾದರೆ ಬೆಳ್ಳುಳ್ಳಿ ಎಸಳುಗಳನ್ನು ಸ್ವಲ್ಪ ಸಮಯ ಬಿಸಿ ನೀರಿನಲ್ಲಿ ಹಾಕಿಡಿ. ನಂತರ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.
ಸಾಮಾನ್ಯವಾಗಿ ಸೇಬು ಕತ್ತರಿಸಿದ ನಂತರ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ತಣ್ಣೀರಿಗೆ ಸ್ವಲ್ಪ ಉಪ್ಪು ಮತ್ತು ನಿಂಬೆ ಬೆರೆಸಿ ಆ ನೀರಿನೊಳಗೆ ಕತ್ತರಿಸಿದ ಸೇಬನ್ನು ಹಾಕಿ ತೆಗೆಯಿರಿ.
ಶುಂಠಿ ಸಿಪ್ಪೆ ತೆಗೆಯಲು ಬೇಗನೆ ತೆಗೆಯಲು ಚಮಚವನ್ನು ಬಳಸಬಹುದು.
ಅಡುಗೆ ಮನೆ ಕೆಲಸವನ್ನು ಶೀಘ್ರವೇ ಮುಗಿಸಲು ನೀವು ಕೂಡಾ ಈ ಟ್ರಿಕ್ಸ್ ಗಳನ್ನು ಬಳಸಬಹುದು.