ಮಸೂರ್ ದಾಲ್ ಬಳಕೆಯಿಂದ ತ್ವಚೆಗಿದೆ ಅದ್ಭುತ ಲಾಭಗಳು, ಈ ರೀತಿ ಬಳಸಿ

Yashaswini V
Aug 05,2024

ಮಸೂರ್ ದಾಲ್

ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಮಸೂರ್ ದಾಲ್ ಆರೋಗ್ಯಕ್ಕಷ್ಟೇ ಅಲ್ಲ ಸುಂದರ ತ್ವಚೆಗೂ ಲಾಭದಾಯಕವಾಗಿದೆ.

ಕೆಂಪು ಮಸೂರ್ ದಾಲ್

ಕೆಂಪು ಮಸೂರ್ ದಾಲ್ ಅನ್ನು ಗಿಡಮೂಲಿಕೆಗಳೊಂದಿಗೆ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ ಹಚ್ಚುವುದರಿಂದ ಮೊಡವೆ, ಎಣ್ಣೆಯುಕ್ತ ಚರ್ಮ, ಡೆಡ್ ಸ್ಕಿನ್ ಸೇರಿದಂತೆ ಚರ್ಮದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

ಜೇನುತುಪ್ಪದೊಂದಿಗೆ ಮಸೂರ್ ದಾಲ್

ಮಸೂರ್ ದಾಲ್ ಪುಡಿ, ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ, ಸ್ವಚ್ಛವಾದ ಮುಖಕ್ಕೆ ಈ ಫೇಸ್ ಪ್ಯಾಕ್ ಹಚ್ಚಿ 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ.

ಕಡಲೆಹಿಟ್ಟು, ಮೊಸರು, ಮಸೂರ್ ದಾಲ್

ಕಡಲೆಹಿಟ್ಟು, ಮೊಸರು, ಮಸೂರ್ ದಾಲ್ ಅನ್ನು ಸಮಪ್ರಮಾಣದಲ್ಲಿ ಬೆರೆಸಿ ಇದಕ್ಕೆ ಚಿಟಿಕೆ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಡೆಡ್ ಸ್ಕಿನ್, ಮೊಡವೆ, ಸ್ಕಿನ್ ಟ್ಯಾನ್ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

ಮಸೂರ್ ದಾಲ್ ಅಕ್ಕಿಹಿಟ್ಟು

ಅಕ್ಕಿಹಿಟ್ಟಿನೊಂದಿಗೆ ಮಸೂರ್ ದಾಲ್ ಪುಡಿ ಬೆರೆಸಿ 3-4 ಹನಿ ಬಾದಾಮಿಎಣ್ಣೆ, ಸ್ವಲ್ಪ ಹಾಲು ಬೆರೆಸಿ ಫೇಸ್ ಪ್ಯಾಕ್ ಹಚ್ಚಿ, ವೃತ್ತಾಕಾರದಲ್ಲಿ ಸ್ಕ್ರಬ್ಬಿಂಗ್ ಮಾಡಿದರೆ ಮುಖದಲ್ಲಿ ಬೇಡದ ಕೂದಲುಗಳನ್ನು ನಿವಾರಿಸಬಹುದು.

ಚೆಂಡು ಹೂ ಮಸೂರ್ ದಾಲ್

ಚೆಂಡು ಹೂ ಪೇಸ್ಟ್ ಜೊತೆಗೆ ಮಸೂರ್ ದಾಲ್ ಪುಡಿ ಬೆರೆಸಿ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ನೈಸರ್ಗಿಕ ಕಾಂತಿಯುತ ತ್ವಚೆ ನಿಮ್ಮದಾಗಿಸಬಹುದು.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story