ಪ್ಯಾನ್ ಕಾರ್ಡ್‌ನಲ್ಲಿ ಹೆಸರು ಬದಲಾಯಿಸಬೇಕೇ? ಇಲ್ಲಿದೆ ಸಿಂಪಲ್ ಟ್ರಿಕ್

ಪ್ಯಾನ್ ಕಾರ್ಡ್

ಬ್ಯಾಂಕಿಂಗ್ ಸೇವೆಗಳಿಂದ ಹಿಡಿದು ಹಣಕಾಸಿನ ಪ್ರತಿ ಕೆಲಸಗಳಿಗೂ ಪ್ಯಾನ್ ಕಾರ್ಡ್ ತುಂಬಾ ಅವಶ್ಯಕ.

ಹೆಸರು ಬದಲಾವಣೆ

ಒಂದೊಮ್ಮೆ ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ಹೆಸರನ್ನು ಬದಲಾಯಿಸಲು ನೀವು ಬಯಸಿದರೆ ಈ ಕೆಲಸ ತುಂಬಾ ಸುಲಭ.

ವೆಬ್‌ಸೈಟ್‌ನಲ್ಲಿ ಪ್ಯಾನ್ ಕಾರ್ಡ್ ಸೇವೆ

ನೀವು UTIITSL ವೆಬ್‌ಸೈಟ್‌ಗೆ ಭೇಣಿ ನೀಡುವ ಮೂಲಕ ಪ್ಯಾನ್ ಕಾರ್ಡ್ ಸೇವೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಕರೆಕ್ಷನ್ ಆಯ್ಕೆ

ಪ್ಯಾನ್ ಕಾರ್ಡ್ ಸೇವೆ ಆಯ್ಕೆಯಲ್ಲಿ ಕರೆಕ್ಷನ್ ಆಯ್ಕೆಯನ್ನು ಆರಿಸಿ.

ಡೇಟಾ ಬದಲಾವಣೆ

ಮುಂದೆ ಪ್ಯಾನ್ ಡೇಟಾದಲ್ಲಿ ಬದಲಾವಣೆ/ತಿದ್ದುಪಡಿ ಅಪ್ಲಿಕೇಶನ್ ಗೋಚರಿಸುತ್ತದೆ. ಇದರಲ್ಲಿ ಎರಡು ಆಯ್ಕೆಗಳು ಕಾಣಿಸುತ್ತವೆ.

ಎರಡು ಆಯ್ಕೆ

ಆ 2 ಆಯ್ಕೆಗಳಲ್ಲಿ ಮೊದಲನೆಯದು ಭೌತಿಕ ಆಯ್ಕೆ, ಮತ್ತೊಂದು ಡಿಜಿಟಲ್ ಆಯ್ಕೆ. ಇದರಲ್ಲಿ ಎರಡನೇ ಆಯ್ಕೆ ಆರಿಸಿ, ಅಗತ್ಯ ಮಾಹಿತಿ ಭರ್ತಿ ಮಾಡಿ ಆಧಾರ್ ಆಧಾರಿತ ಇ-ಕೆವೈಸಿ ಬಾಕ್ಸ್ ಕ್ಲಿಕ್ ಮಾಡಿ.

ಪ್ಯಾನ್ ಕಾರ್ಡ್

ಇದರಲ್ಲಿ ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸಿ, ಭೌತಿಕ ಪ್ಯಾನ್ ಕಾರ್ಡ್/ e-pan ಕಾರ್ಡ್ ಗಳಲ್ಲಿ ಒಂದನ್ನು ಆರಿಸಿ ಸಲ್ಲಿಸಿ.

ಇ-ಕೆವೈಸಿ

ಇ-ಕೆವೈಸಿಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಇದನ್ನು ನಮೂದಿಸಿ ಸಲ್ಲಿಸಿ. ಬಳಿಕ eSignಗಾಗಿ ಮತ್ತೊಂದು ಓಟಿಪಿ ಬರುತ್ತದೆ ಇದನ್ನೂ ನಮೂದಿಸಿ ಸಲ್ಲಿಸಿ.

ನವೀಕರಣ ಪ್ರಕ್ರಿಯೆ

ಈ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ UTIITSL ನಿಮ್ಮ ನವೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ.

VIEW ALL

Read Next Story