ಪೇರಳೆ ಹಣ್ಣು ಎಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿರುತ್ತದೆಯೋ ಅದರ ಎಲೆಗಳು ಕೂಡಾ ಅಷ್ಟೇ ಪೋಷಕ ತತ್ವಗಳನ್ನು ಹೊಂದಿರುತ್ತದೆ. ಪೇರಳೆ ಎಲೆಯ ಪ್ರಯೋಜನಗಳನ್ನು ನೋಡೋಣ.
ಪೇರಳೆ ಎಲೆಯಲ್ಲಿ ವಿಟಮಿನ್ ಸಿ, ಬಿ, ಕ್ಯಾಲ್ಶಿಯಂ, ಕಬ್ಬಿಣ, ಮೆಗ್ನಿಶಿಯಂ, ರಂಜಕ, ಪೊಟ್ಯಾಷಿಯಂ, ಪ್ರೋಟೀನ್ ಇತ್ಯಾದಿ ಪೋಷಕಾಂಶಗಳು ಇರುತ್ತವೆ.
ಈ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತದೆ. ಗ್ಯಾಸ್ಟ್ರಿಕ್ ಅಲ್ಸರ್ ನಿಂದಲೂ ರಕ್ಷಣೆ ಸಿಗುತ್ತದೆ.
ತೂಕವನ್ನು ಕಡಿಮೆ ಮಾಡಲು ಇದು ಬಹಳ ಉಪಯುಕ್ತವಾಗಿದೆ. ಇದು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಗಳನ್ನೂ ಹೀರಿಕೊಳ್ಳಲು ಅನುಮತಿಸುವುದಿಲ್ಲ. ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
ಈ ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅತಿಸಾರದ ಸಮಸ್ಯೆ ಕಡಿಮೆಯಾಗುತ್ತದೆ. ದೇಹದಲ್ಲಿ ಹೊಮೊಗ್ಲೋಬಿನ್ ಹೆಚ್ಚುತ್ತದೆ.
ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರೆ ಪೇರಳೆ ಎಲೆಗಳು ಸಹಾಯ ಮಾಡುತ್ತದೆ. ಕೆಮ್ಮು, ನೆಗಡಿ, ಎದೆಯುರಿ, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಪೇರಳೆ ಎಲೆಗಳಲ್ಲಿ ಅಲರ್ಜಿ ವಿರೋಧಿ ಗುಣಗಳಿದ್ದು, ಇದು ಅಲರ್ಜಿಯಿಂದ ಪರಿಹಾರ ನೀಡುತ್ತದೆ.
ಪೇರಳೆ ಎಲೆಗಳನ್ನು ಕುಡಿಸಿದ ನೀರನ್ನ್ನು ತಲೆ ಕೂದಲಿಗೆ ನಿಯಮಿತವಾಗಿ ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.
ಈ ರೀತಿಯಲ್ಲ್ಕಿ ಪೇರಳೆ ಎಲೆ ನಮ್ಮ ನಿತ್ಯದ ಸಮಸ್ಯೆಗೆ ಅದ್ಭುತ ಪರಿಹಾರ ನೀಡುತ್ತದೆ.