ನೆಲ್ಲಿಕಾಯಿ ಕೂದಲಿಗೆ ನೈಸರ್ಗಿಕ ಔಷಧಿಯಾಗಿ ಕೆಲಸ ಮಾಡುತ್ತದೆ. ನೆಲ್ಲಿಕಾಯಿಯನ್ನು ಬಳಸುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗಿ, ಕೂದಲು ಉದಾರದಂತೆ ತಡೆಯುತ್ತದೆ.
ನೆಲ್ಲಿಕಾಯಿಯ ಎಣ್ಣೆಯನ್ನು ಬಳಸಿ ಕೂದಲಿಗೆ ಮಸಾಜ್ ಮಾಡುವುದರಿಂದ ಇದು ಕೂದಲನ್ನು ಬೇರಿನಿಂದಲೇ ಬಲವಾಗಿಸಿ, ಕೂದಲು ಉದರದಂತೆ ಕಾಪಾಡುತ್ತದೆ.
ನೆಲ್ಲಿಕಾಯಿಯನ್ನು ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು, ಇದು ಕೂದಲನ್ನು ಬೇರಿನಿಂದೆಲೆ ಗಟ್ಟಿಯಾಗಿಸಿ, ಕೂದಲು ಉದುರದಂತೆ ಕಾರ್ಯ ನಿರ್ವಹಿಸುತ್ತದೆ.
ನೆಲ್ಲಿಕಾಯಿಯ ಪುಡಿಯನ್ನು ಮೊಸರು ಅಥವಾ ತೆಂಗಿನ ಎಣ್ಣೆಯಲ್ಲಿ ಬೆರಸಿ ನಿಮ್ಮ ತಲೆ ಕೂದಲಿಗೆ ಹಚ್ಚುವುದರಿಂದ ನಿಮ್ಮ ತಲೆಯಲ್ಲಿನ ಹೊಟ್ಟು ನಿವಾರಣೆಯಾಗಿ ನಿಮ್ಮ ಕೂದಲಿಗೆ ನೈಸರ್ಗಿಕ ಒಳಪು ನೀಡುತ್ತದೆ.
ಸೀಗೆಕಾಯಿ ಪುಡಿಯೊಂದಿಗೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಪ್ಯಾಕ್ ಮಾಡಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಇದು ನಿಮ್ಮ ಕೂದಲು ಹೊಡೆಯದಂತೆ ರಕ್ಷಿಸಿ, ನಿಮ್ಮ ಕೂದಲನ್ನು ಗಟ್ಟಿ ಮುಟ್ಟಗಿಸುತ್ತದೆ.
ತೆಂಗಿನ ಎಣ್ಣೆಯಲ್ಲಿ ಒಣಗಿದ ನೆಲ್ಲಿಕಾಯಿ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ ಹಾರಿದ ನಂತರ ಒಂದು ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟು, ಅದನ್ನು ವಾರಕ್ಕೆ ಮೂರು ಬಾರಿ ನಿಮ್ಮ ತಲೆಗೆ ಹಚ್ಚುವುದರಿಂದ ನಿಮ್ಮ ಕೂದಲು ಗಟ್ಟಿಯಾಗುತ್ತದೆ.