ಮೃದುವಾಗಿ, ನಯವಾಗಿ, ಕಪ್ಪಾದ ಕೂದಲು ಬೆಳೆಯಲು ಈ ಕಾಯಿಯ ರಸವನ್ನು ಹಚ್ಚಿ

Bhavishya Shetty
Oct 07,2023

ಬ್ಯಾಕ್ಟೀರಿಯಾ ಮುಕ್ತ

ಅಂಟುವಾಳ ಕಾಯಿಯಲ್ಲಿ ಹೇರಳವಾಗಿ ಕಬ್ಬಿಣಾಂಶ ಇರುತ್ತದೆ, ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್’ಗಳು ಕೂದಲಿನ ಬೆಳವಣಿಗೆಗೆ ಅಗತ್ಯ. ಇದನ್ನು ಶ್ಯಾಂಪೂ ರೀತಿ ಬಳಸಿದರೆ, ನೆತ್ತಿಯಲ್ಲಿ ಯಾವುದೇ ರೀತಿಯ ಬ್ಯಾಕ್ಟೀರಿಯಾ ಅಥವಾ ಫಂಗಸ್ ಇದ್ದರೆ ಅದು ಮುಕ್ತವಾಗುತ್ತದೆ.

ನಿರ್ಜೀವವಾಗಿದ್ದರೆ...

ನಿಮ್ಮ ಕೂದಲು ಶುಷ್ಕ ಮತ್ತು ನಿರ್ಜೀವವಾಗಿದ್ದರೆ ಅಥವಾ ಹೊಳಪನ್ನು ಕಳೆದುಕೊಂಡಿದ್ದರೆ, ಅಂಟುವಾಳ ಕಾಯಿಯ ರಸವನ್ನು ಶ್ಯಾಂಪೂಗೆ ಪರ್ಯಾಯವಾಗಿ ಬಳಸಿ.

ತಲೆಹೊಟ್ಟು ಸಮಸ್ಯೆ...

ತಲೆಹೊಟ್ಟು ಸಮಸ್ಯೆಗೆ ಕೂಡ ಇದು ಪರಿಹಾರವನ್ನು ನೀಡುತ್ತದೆ. ನೀರಿನಲ್ಲಿ ಅಂಟುವಾಳ ಕಾಯಿಯನ್ನು ನೆನೆಸಿಟ್ಟು, ಬಳಿಕ ಅದನ್ನು ನಿಯಮಿತವಾಗಿ ಬಳಸಿ. ಸ್ನಾನ ಮಾಡುವ ಮೊದಲು ನೀವು ಈ ರಸವನ್ನು ತಲೆಗೆ ಹಚ್ಚಬಹುದು.

ಕೂದಲು ಉದುರುತ್ತಿದ್ದರೆ...

ಕೂದಲು ಅತಿಯಾಗಿ ಉದುರುತ್ತಿದ್ದರೆ ಸ್ನಾನ ಮಾಡುವ ಮೊದಲು ಅಂಟುವಾಳ ಕಾಯಿಯ ನೀರಿನಿಂದ ಸ್ವಚ್ಛಗೊಳಿಸಿ. ಇದು ಕೂದಲು ಉದುರುವಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಂಟುವಾಳ ಹೇರ್'ಪ್ಯಾಕ್

ಇನ್ನು ಅಂಟುವಾಳ ಕಾಯಿಯ ಹೇರ್ ಪ್ಯಾಕ್ ಮಾಡಲು 1 ಮೊಟ್ಟೆ, 1 ಟೀ ಚಮಚ ನೆಲ್ಲಿಕಾಯಿ ಪುಡಿ, ಒಣ ಅಂಟುವಾಳ ಕಾಯಿ ಮತ್ತು ಶಿಕಾಕಾಯಿ ಪುಡಿಯನ್ನು ಮಿಶ್ರಣ ಮಾಡಿ. ಈ ಪೇಸ್ಟ್’ನಿಂದ ನೆತ್ತಿಯನ್ನು ಮಸಾಜ್ ಮಾಡಿ. ಬಳಿಕ 30 ನಿಮಿಷಗಳ ಕಾಲ ಬಿಡಿ. ನಂತರ ತಲೆಯನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಈ ಪೇಸ್ಟ್ ಅನ್ನು ವಾರಕ್ಕೆ ಎರಡು ಬಾರಿ ಬಳಸಿದರೆ ಕೂದಲು ಉದುರುವುದು ನಿಲ್ಲುತ್ತದೆ.

ಕೂದಲಿನ ಬೆಳವಣಿಗೆ

ಕೂದಲು ತೊಳೆಯಲು ಅಂಟುವಾಳ ಕಾಯಿಯ ಶಾಂಪೂ ಬಳಸಿ. ಈ ಶಾಂಪೂ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ತಲೆಹೊಟ್ಟು ನಿವಾರಿಸುತ್ತದೆ.

ಅಂಟುವಾಳ ಶಾಂಪೂ

100 ಗ್ರಾಂ ನೆಲ್ಲಿಕಾಯಿ, 100 ಗ್ರಾಂ ಒಣ ಅಂಟುವಾಳ ಮತ್ತು ಶಿಕಾಕಾಯಿಯನ್ನು 1 ಲೀಟರ್ ನೀರಿನಲ್ಲಿ ಅರ್ಧಕ್ಕೆ ಇಳಿಸುವವರೆಗೆ ಕುದಿಸಿ. 2 ತಿಂಗಳ ಕಾಲ ಈ ಶಾಂಪೂ ಬಳಸಿ. ಪ್ರಯೋಜನಗಳು ನಿಮಗೇ ಗೋಚರಿಸುತ್ತವೆ.

ಸೂಚನೆ

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ

VIEW ALL

Read Next Story