ದಟ್ಟ.. ಮೊನಕಾಲುದ್ದ ಕೂದಲಿಗೆ ಈ ಎಣ್ಣೆ ಸಾಕು! ಒಂದೇ ವಾರದಲ್ಲಿ ಪಕ್ಕಾ ರಿಸಲ್ಟ್..
ದಪ್ಪ ಮತ್ತು ಉದ್ದನೆಯ ಕೂದಲು ಯಾರಿಗೆ ಬೇಡ ಹೇಳಿ.. ಇದಕ್ಕಾಗಿ ಹರಸಾಹಸ ಪಡುತ್ತಿರುವವರು ಸಾಕಷ್ಟಿದ್ದಾರೆ..
ಉದ್ದ ಕಪ್ಪು ಕೂದಲಿದ್ದರೇ ಹೆಂಗಳೆಯರ ಮುಖ ಲಕ್ಷಣವಾಗಿರುತ್ತದೆ.. ಹಾಗಾದ್ರೆ ಇದಕ್ಕಾಗಿ ಏನು ಮಾಡಬೇಕು ಅಂತೀರಾ.. ಮುಂದೆ ಓದಿ.
ಮಹಿಳೆಯರು ಮತ್ತು ಪುರುಷರ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲು ಕೂಡ ಬಹಳ ಮುಖ್ಯವಾಗಿದೆ.
ಕೂದಲು ಉದ್ದವಾಗಿ ಬೆಳೆಯಲು ಅನೇಕ ಎಣ್ಣೆಗಳನ್ನು ಬಳಸಲಾಗುತ್ತದೆ.
ಆದರೆ ಈ ಮನೆಯಲ್ಲಿ ತಯಾರಿಸಿದ ಎಣ್ಣೆಯನ್ನು ಒಮ್ಮೆ ಬಳಸಿದ ನಂತರ ನಿಮ್ಮ ಕೂದಲಿನ ಬದಲಾವಣೆಯನ್ನು ನೀವು ಖಂಡಿತವಾಗಿ ಗಮನಿಸಬಹುದು.
ಈರುಳ್ಳಿ, ಲವಂಗ, ಮೆಂತ್ಯ ಮತ್ತು ಸಾಸಿವೆ ಎಣ್ಣೆಯನ್ನು ಕಡಾಯಿಯಲ್ಲಿ ಬಿಸಿ ಮಾಡಿ ಅದಕ್ಕೆ ಈರುಳ್ಳಿಯ ರಸ ಹಾಗೂ ಲವಂಗವನ್ನು ಸೇರಿಸಿ ಕಡಿಮೆ ಉರಿಯಲ್ಲಿ ಏಳು ನಿಮಿಷಗಳ ಕಾಲ ಕುದಿಸಿ.
ನಂತರ ಆ ಎಣ್ಣೆಯಲ್ಲಿ ಸ್ವಲ್ಪ ಮೆಂತ್ಯ ಕಾಳುಗಳನ್ನು ಹಾಕಿ.. ತಣ್ಣಗಾದ ಮೇಲೆ ತಲೆಯ ಬುಡಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.
ಇದನ್ನು ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾಡಬೇಕು. ಒಂದು ವಾರದೊಳಗೆ ನೀವು ಉತ್ತಮ ಬದಲಾವಣೆಯನ್ನು ನೋಡುತ್ತೀರಿ.