ಕೊರಿಯನ್ ಹೆಣ್ಣು ಮಕ್ಕಳ ಮುಖದ ಮೇಲೆ ಯಾವುದೇ ರೀತಿಯ ಕಲೆ ಗಳಿರುವುದಿಲ್ಲ .
ತಮ್ಮ ತ್ವಚೆಯನ್ನು ಸುಂದರವಾಗಿರಿಸಲು ಮತ್ತು ಹೊಳೆಯುವಂತೆ ಮಾಡಲು ಅಲ್ಲಿನ ಹುಡುಗಿಯರು ಬಾರ್ಲಿ ಚಹಾವನ್ನು ಸೇವಿಸುತ್ತಾರೆ.
ಈ ಚಹಾವನ್ನು ಸೇವಿಸುವುದರಿಂದ ಚರ್ಮವು ವಿಶೇಷ ಹೊಳಪು ಪಡೆಯುತ್ತದೆ.
ಬಾರ್ಲಿಯನ್ನು ಹರಿದು ಈ ಚಹಾವನ್ನು ತಯಾರಿಸಲಾಗುತ್ತದೆ.
ಬಾಣಲೆಯಲ್ಲಿ ಬಾರ್ಲಿಯನ್ನು ತೆಗೆದುಕೊಂಡು ಅದನ್ನು 5-6 ನಿಮಿಷ ಹುರಿಯಬೇಕು. ಇನ್ನೊಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಬೇಕು.
ಬಿಸಿ ನೀರಿಗೆ ಹುರಿದ ಬಾರ್ಲಿಯನ್ನು ಹಾಕಿ 15 ರಿಂದ 20 ನಿಮಿಷಗಳವರೆಗೆ ಕುದಿಸಿ. ಈ ನೀರನ್ನು ಬಿಸಿಯಾಗಿರುವಾಗ ಅಥವಾ ತಣ್ಣಗಾದ ಬಳಿಕ ಕುಡಿಯಿರಿ.
ಇನ್ನು ಈ ನೀರು ತಣ್ಣಗಾದ ಬಳಿಕ ಇದನ್ನೂ ಟೋನರ್ ನಂತೆ ನಿಮ್ಮ ಮುಖಕ್ಕೆ ಹಚ್ಚಬಹುದು.
ಬಾರ್ಲಿ ಚಹಾ ಮಾಡಿ ಅದನ್ನು ಐಸ್ ಟ್ರೇನಲ್ಲಿ ಹಾಕಿಟ್ಟು ಕೊಳ್ಳಿ. ನಂತರ ಈ ಕ್ಯೂಬ್ ಗಳ ಸಹಾಯದಿಂದ ಮುಖಕ್ಕೆ ಮಸಾಜ್ ಮಾಡಿ.
ಇನ್ನು ಈ ನೀರಿನಿಂದ ಕೂದಲಿಗೆ ಸ್ನಾನ ಮಾಡಲೂ ಬಹುದು. ಕೂದಲು ಕೂಡಾ ಹೊಳಪು ಪಡೆಯುತ್ತದೆ.