ಬಿಯರ್ ನಶೆಯಷ್ಟೇ ಏರಿಸಲ್ಲ ನಿಮ್ಮ ಸೌಂದರ್ಯವನ್ನೂ ಹೆಚ್ಚಿಸುತ್ತೆ!
ಬಿಯರ್ ಆರೋಗ್ಯಕ್ಕೆ ಒಳ್ಳೆಯದ್ದೋ ಅಥವಾ ಕೆಟ್ಟದ್ದೋ ಎಂಬ ಚರ್ಚೆ ಸದಾ ನಡೆಯುತ್ತಿರುತ್ತದೆ.
ಬಿಯರ್ ಆರೋಗ್ಯಕ್ಕೆ ಒಳ್ಳೆಯದೇ, ಕೆಟ್ಟದ್ದೆ ಎಂಬ ಬಗ್ಗೆ ನಿಖರವಾಗಿ ತಿಳಿದಿಲ್ಲ. ಆದಾರೂ, ಇದು ಉತ್ತಮ ಸೌಂದರ್ಯವರ್ಧಕವಂತೂ ಹೌದು.
ಸೌಂದರ್ಯ ತಜ್ಞರ ಪ್ರಕಾರ, ಬಿಯರ್ ಮುಖದ ಸೌಂದರ್ಯವನ್ನು ಹೆಚ್ಚಿಸಲು ತುಂಬಾ ಪ್ರಯೋಯಜನಕಾರಿ ಆಗಿದೆ. ಇದರ ಪ್ರಯೋಜನಗಳೆಂದರೆ...
ಬಿಯರ್ ಅನ್ನು ಹತ್ತಿ ಉಂಡೆಗಳ ಸಹಾಯದಿಂದ ಮುಖಕ್ಕೆ ಹಚ್ಚುವುದರಿಂದ ಬಿಯರ್‌ನಲ್ಲಿರುವ ಯೀಸ್ಟ್ ಮೊಡವೆ ನಿವಾರಿಸಲು ಸಹಕಾರಿ ಆಗಿದೆ.
ಮುಖಕ್ಕೆ ವಾರದಲ್ಲಿ ಒಂದೆರಡು ಬಾರಿ ಬಿಯರ್ ಅನ್ವಯಿಸುವುದರಿಂದ ಚರ್ಮದ ಪಿಹೆಚ್ ಮಟ್ಟ ಸಮತೋಲನಗೊಳ್ಳುತ್ತದೆ.
ಬಿಯರ್‌ನಲ್ಲಿ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಅಪ್ಪ್ಲೈ ಮಾಡಿ ಅದು ಚೆನ್ನಾಗಿ ಡ್ರೈ ಆದ ಬಳಿಕ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಮುಖದಲ್ಲಿರುವ ಕಪ್ಪುಕಲೆಗಳು ಮಾಯವಾಗುತ್ತವೆ.
ಒಂದೆರಡು ಚಮಚ ಬಿಯರ್‌ನಲ್ಲಿ ಅರ್ಧ ಚಮಚ ಮೊಸಲು, ಆಲಿವ್ ಎಣ್ಣೆ ಮತ್ತು ಸ್ವಲ್ಪ ಬಾದಾಮಿ ಪೇಸ್ಟ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಬಳಿಕ ಫೇಸ್ ವಾಶ್ ಮಾಡಿ ಈ ರೀತಿ ಮಾಡುವುದರಿಂದ ಕಾಂತಿಯುತ ತ್ವಚೆ ನಿಮ್ಮದಾಗಿಸಬಹುದು.
ಮುಖಕ್ಕೆ ಬಿಯರ್ ಅಪ್ಪ್ಲೈ ಮಾಡುವುದರಿಂದ ಚರ್ಮದ ರಂಧ್ರಗಳಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ನಿವಾರಿಸಿ ಚರ್ಮವನ್ನು ಸ್ವಚ್ಚಗೊಳಿತ್ತದೆ.
ಮುಖಕ್ಕೆ ಬಿಯರ್ ಲೇಪಿಸುವುದರಿಂದ ಚರ್ಮದ ಸೋಂಕುಗಳಿಂದ ರಕ್ಷಿಸಿ, ಚರ್ಮದ ಸಮಸ್ಯೆಗಳಿಂದ ದೂರ ಉಳಿಯಲು ಸಹಾಯಕವಾಗಿದೆ. ಸೂಚನೆ : ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.