ಉಬ್ಬಿರುವ ಹೊಟ್ಟೆಯನ್ನು ಕರಗಿಸಿ ಚಪ್ಪಟೆಯಾದ ಹೊಟ್ಟೆಯನ್ನು ಪಡೆಯಲು ಚಯಾಪಚಯವನ್ನು ಹೆಚ್ಚಿಸುವ ಆಹಾರಗಳು ಹೆಚ್ಚು ಸಹಾಯಕವಾಗಿವೆ.
ಫೈಬರ್ ನ ಅತ್ಯುತ್ತಮ ಮೂಲವಾಗಿರುವ ಓಟ್ಸ್ ಅನ್ನು ಮಾರ್ನಿಂಗ್ ಬ್ರೇಕ್ಫಾಸ್ಟ್ ಆಗಿ ಸೇವಿಸುವುದರಿಂದ ಇದು ದೇಹಕ್ಕೆ ದಿನವಿಡೀ ಶಕ್ತಿ ನೀಡುತ್ತದೆ. ವೇಗವಾಗಿ ತೂಕ ಇಳಿಕೆಗೂ ಸಹಕಾರಿ.
ಮೂಂಗ್ ದಾಲ್, ಮಸೂರ್ ದಾಲ್ ಗಳಲ್ಲಿ ಪ್ರೊಟೀನ್ ಮತ್ತು ಫೈಬರ್ ಹೆಚ್ಚಾಗಿರುವುದರಿಂದ ತೂಕ ನಷ್ಟಕ್ಕೆ ಇವು ಪರಿಪೂರ್ಣ ಆಹಾರವಾಗಿದೆ.
ಫೈಬರ್, ಪ್ರೊಟೀನ್, ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಚಿಯಾ ಸೀಡ್ಸ್ ನೀರನ್ನು ಅನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತ್ವರಿತವಾಗಿ ತೂಕ ಇಳಿಯುತ್ತೆ.
ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಉಳಿಯಬಹುದು ಎನ್ನಲಾಗುತ್ತದೆ. ಸೇಬು ಫೈಬರ್ ರಿಚ್ ಆಹಾರವಾಗಿದ್ದು ಬೇಲಾಗಿನ ಆಹಾರದಲ್ಲಿ ಇದನ್ನು ತಿನ್ನುವುದರಿಂದ ವೇಗವಾಗಿ ಹೊಟ್ಟೆ ಕರಗುತ್ತದೆ.
ಪ್ರೊಟೀನ್ ಸಮೃದ್ಧ ಮೂಲವಾಗಿರುವ ಮೊಟ್ಟೆಯನ್ನು ಬೆಳಗಿನ ಆಹಾರದಲ್ಲಿ ಸೇವಿಸುವುದರಿಂದು ಇದು ತೂಕ ನಷ್ಟವನ್ನು ಬೆಂಬಲಿಸುತ್ತದೆ.
ಕಾಫಿ, ಟೀ ಬದಲಿಗೆ ಗ್ರೀನ್ ಟೀ ಕುಡಿಯುವುದರಿಂದ ಇದು ದೇಹದಲ್ಲಿ ಶೇಖರವಾಗಿರುವ ಕೊಬ್ಬನ್ನು ಸುಡಲು, ವೇಗವಾಗಿ ತೂಕ ಇಳಿಸಲು ಸಹಕಾರಿ ಆಗಿದೆ.
ಹಾಲು, ಸಕ್ಕರೆ ಹಾಕದೆ ಬ್ಲಾಕ್ ಕಾಫಿ ತಯಾರಿಸಿ ಕುಡಿಯುವುದರಿಂದ ಆರೋಗ್ಯಕರವಾಗಿ ತ್ವರಿತವಾಗಿ ತೂಕ ಕಡಿಮೆ ಮಾಡಿ ಸ್ಲಿಮ್ ಬೆಲ್ಲಿ ನಿಮ್ಮದಾಗಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.