ಇಂದಿನ ಕಾಲದಲ್ಲಿ, ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಬಣ್ಣಕ್ಕೆ ತಿರುವುದು, ಬೊಕ್ಕ ತಲೆಯಾಗುವುದು, ಕೂದಲಿನ ತುದಿ ಒಡೆಯುವ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಇದಕ್ಕೆಲ್ಲಾ ಹಾರ್ಮೋನುಗಳ ಅಸಮತೋಲನ, ಪೋಷಕಾಂಶಗಳ ಕೊರತೆ, ಕಳಪೆ ಜೀವನಶೈಲಿ ಮತ್ತು ತಪ್ಪು ಉತ್ಪನ್ನಗಳ ಬಳಕೆಯೂ ಕಾರಣವಾಗಬಹುದು.
ಹೀಗಿರುವಾಗ ಮನೆಯಲ್ಲಿ ಇರುವ ತೆಂಗಿನೆಣ್ಣೆ ಮತ್ತು ನಿಂಬೆಯನ್ನು ಬಳಸಿ ಕೂದಲಿನ ಆರೋಗ್ಯ ಮತ್ತಷ್ಟು ಹೆಚ್ಚಿಸಬಹುದು. ಇವೆರಡನ್ನೂ ಬಳಸುವುದರಿಂದ ಕೂದಲು ಆಂತರಿಕವಾಗಿ ಗಟ್ಟಿಯಾಗುವುದಲ್ಲದೆ ಮೃದುವೂ ಆಗುತ್ತದೆ.
ತೆಂಗಿನೆಣ್ಣೆಯು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇನ್ನು ತಲೆಹೊಟ್ಟು ಹೋಗಲಾಡಿಸುವ ಜೊತೆಗೆ, ನಿಂಬೆಯು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ. ಕೂದಲು ಕಪ್ಪಾಗಲು ಮತ್ತು ಕೂದಲಿನ ಬೆಳವಣಿಗೆಯಾಗಲು ತೆಂಗಿನೆಣ್ಣೆ ಮತ್ತು ಲಿಂಬೆಯನ್ನು ಹೇಗೆ ಹಚ್ಚಬೇಕು ಎಂದು ತಿಳಿಯೋಣ.
ಸ್ವಲ್ಪ ಉಗುರುಬೆಚ್ಚಗಿನ ತೆಂಗಿನ ಎಣ್ಣೆಗೆ 1 ಚಮಚ ನಿಂಬೆ ರಸವನ್ನು ಸೇರಿಸಿ ಮಿಶ್ರಣವನ್ನು ತಯಾರಿಸಿ. ಈಗ ಈ ಮಿಶ್ರಣವನ್ನು ಕೂದಲು ಮತ್ತು ನೆತ್ತಿಯ ಮೇಲೆ 1 ಗಂಟೆ ಕಾಲ ಹಚ್ಚಿ. ನಂತರ ಕೂದಲನ್ನು ಮೃದುವಾಗಿ ಮಸಾಜ್ ಮಾಡಿ. ಅದರ ನಂತರ ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ.
ಈ ಮಿಶ್ರಣವನ್ನು ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚುತ್ತದೆ ಮತ್ತು ಕೂದಲು ಕಪ್ಪಾಗಿರುತ್ತದೆ. ತೆಂಗಿನೆಣ್ಣೆ ಮತ್ತು ನಿಂಬೆಹಣ್ಣನ್ನು ಹಚ್ಚುವುದರಿಂದ ಕೂದಲಿಗೆ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ.
ಕೊಬ್ಬರಿ ಎಣ್ಣೆ ಮತ್ತು ನಿಂಬೆರಸವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.
ತೆಂಗಿನೆಣ್ಣೆ ಮತ್ತು ನಿಂಬೆ ರಸವನ್ನು ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿರುವ ಗುಣಲಕ್ಷಣಗಳು ಕಾಲಜನ್ ಅನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೂದಲು ದೀರ್ಘಕಾಲದವರೆಗೆ ಕಪ್ಪಾಗಿರುತ್ತದೆ.
ಆರೋಗ್ಯಕರ ಕೂದಲಿಗೆ, ತೆಂಗಿನ ಎಣ್ಣೆ ಮತ್ತು ನಿಂಬೆ ರಸದ ಮಿಶ್ರಣವನ್ನು ಹಚ್ಚಿ, ಇದನ್ನು ಹಚ್ಚುವುದರಿಂದ ಕೂದಲು ಹೊಳೆಯುತ್ತದೆ ಮತ್ತು ಶುಷ್ಕತೆಯೂ ಸುಲಭವಾಗಿ ನಿವಾರಣೆಯಾಗುತ್ತದೆ. ತೆಂಗಿನ ಎಣ್ಣೆಯು ಕೂದಲಿಗೆ ದೀರ್ಘಕಾಲ ಪೋಷಣೆಯನ್ನು ನೀಡುತ್ತದೆ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.