ಈ ತಂತ್ರಜ್ಞಾನ ಜಗತ್ತಿನಲ್ಲಿ ಕಣ್ಣುಗಳ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.
ಇತ್ತೀಚಿನ ದಿನಗಳಲ್ಲಿ ಕಣ್ಣುಗಳ ಸಮಸ್ಯೆ ಹೆಚ್ಚಾಗಲು ಗ್ಯಾಜೆಟ್ಸ್ ಗಳ ಬಳಕೆ ಹೆಚ್ಚಾಗಿರುವುದೇ ಪ್ರಮುಖ ಕಾರಣ. ಆದರೆ, ಕೆಲವು ಮನೆಮದ್ದುಗಳಿಂದ ನೈಸರ್ಗಿಕವಾಗಿ ಕಣ್ಣುಗಳ ಆರೋಗ್ಯ ಸುಧಾರಿಸಬಹುದು.
ನಿತ್ಯ ಕನಿಷ್ಠ 30ನಿಮಿಷಗಳ ಕಾಲ ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
ಪ್ರತಿದಿನ 10-15 ನಿಮಿಷಗಳ ಕಾಲ ಕಣ್ಣುಗಳ ವ್ಯಾಯಾಮ ಮಾಡುವುದರಿಂದ ದೃಷ್ಟಿ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ನೈಸರ್ಗಿಕವಾಗಿ ನಿವಾರಿಸಲು ಸಹಕಾಗಿಯಾಗಿದೆ.
ಕ್ಯಾರೆಟ್‌ನಲ್ಲಿ ಕಂಡು ಬರುವ ವೇತಾ ಕ್ಯಾರೋಟಿನ್, ವಿಟಮಿನ್ ಎ, ಈ, ಸಿ, ಬಿ8, ಕೆ, ನಾರಿಣಾಂಶ ಎಲ್ಲವೂ ಕೂಡ ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಹಾಗಾಗಿ ನಿತ್ಯ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯುವುದು ಕಣ್ಣಿನ ಆರೋಗ್ಯ ಸುಧಾರಿಸುವಲ್ಲಿ ಪರಿಣಾಮಕಾರಿ.
ನೆನೆಸಿಟ್ಟ ಬಾದಾಮಿಯಲ್ಲಿ ವಿಟಮಿನ್ ಇ, ಎ ಹೇರಳವಾಗಿದ್ದು ಇದು ಕಣ್ಣಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ತುಂಬಾ ಲಾಭದಾಯಕ ಎಂದು ಸಾಬೀತುಪಡಿಸಲಿದೆ.
ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಎ, ಸತು ಹೇರಳವಾಗಿದ್ದು ಇವುಗಳ ಬಳಕೆಯಿಂದ ಆರೋಗ್ಯಕರ ಕಣ್ಣುಗಳನ್ನು ಕಾಪಾಡಿಕೊಳ್ಳಬಹುದು.
ಬೆಟ್ಟದ ನೆಲ್ಲಿಕಾಯಿಯಲ್ಲಿ ಕಂಡು ಬರುವ ಕಾಂಜಂಕ್ಟಿವಿಟಿಸ್ ಮತ್ತು ಗ್ಲುಕೋಮಾ ಹಾಗೂ ವಿಟಮಿನ್ ಸಿ ರೆಟಿನಾ ಕೋಶಗಳನ್ನು ರಕ್ಷಿಸುವಲ್ಲಿ ತುಂಬಾ ಪ್ರಯೋಜನಕಾರಿ ಆಗಿವೆ. ಹಾಗಾಗಿ, ಕಣ್ಣಿನ ಆರೋಗ್ಯಕ್ಕೆ ಇದು ಅತ್ಯುತ್ತಮ ಆಹಾರ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.