ಅಕ್ಕಿ ನೀರು ವಿಟಮಿನ್ ಬಿ ಅನ್ನು ಒಳಗೊಂಡಿರುತ್ತದೆ. ಇದು ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ರಕ್ತದ ಹರಿವನ್ನು ನಿಯಂತ್ರಿಸುತ್ತದೆ. ಇದು ಚರ್ಮಕ್ಕೆ ಒಳ್ಳೆಯದು.
ಅಕ್ಕಿ ನೀರು ಖನಿಜ ಹಾಗೂ ಪ್ರೋಬಯಾಟಿಕ್ಕಳನ್ನು ಹೊಂದಿದ್ದು. ಕರುಳಿನ ಆರೋಗ್ಯವನ್ನು ಸುಧಾರಿಸಿ ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ಮಲಬದ್ಧತೆ ಮತ್ತು ಅತಿಸಾರದಂತೆ ತೊಂದರೆಗಳಿಗೆ ಇದು ರಾಮಬಾಣ.
ಬೇಸಿಗೆಯಲ್ಲಿ ದೇಹವು ನೀರು ಮತ್ತು ಲವಣಗಳನ್ನು ಕಳೆದುಕೊಂಡಾಗ ಅಕ್ಕಿ ನೀರು ಮಾಂತ್ರಿಕ ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ.
ಅಕ್ಕಿಯ ನೀರು ನೈಸರ್ಗಿಕ ಸನ್ ಸ್ಟ್ರೀನ್ ಆಗಿ ಕಾರ್ಯನಿರ್ವಹಿಸುತ್ತದೆ. UV ಕಿರಣಗಳ ವಿರುದ್ಧ ಚರ್ಮವನ್ನು ಇದು ರಕ್ಷಿಸುತ್ತದೆ.
ಅಕ್ಕಿ ನೀರು ಕಾರ್ಬೋಹೈಡ್ರೆಟ್ ಗಳಲ್ಲಿ ಸಮೃದ್ಧವಾಗಿದೆ. ಪ್ರತಿದಿನ ಒಂದು ಲೋಟ ಅಕ್ಕಿ ನೀರನ್ನು ಕುಡಿಯುವುದರಿಂದ ನೀವು ದಿನವಿಡೀ ಚೈತನ್ಯದಿಂದ ಇರಬಹುದು.
ತಜ್ಞರ ಪ್ರಕಾರ ಅಕ್ಕಿ ನೀರು ಸುಟ್ಟ ಚರ್ಮ ಮತ್ತು ಚರ್ಮದ ಅಲರ್ಜಿಗೆ ಅತ್ಯುತ್ತಮ ಪರಿಹಾರವಾಗಿದೆ.