ಮುಂಜಾನೆ ಎದ್ದ ಕೂಡಲೇ ಒಂದು ಲೋಟ ನಿಂಬೆ ಜ್ಯೂಸ್ ಕುಡಿದರೆ ಇದೆ ಇಷ್ಟೆಲ್ಲಾ ಲಾಭ

ನಿಂಬೆಯ ಪ್ರಯೋಜನ

ವಿಟಮಿನ್ ಸಿ ಜೊತೆಗೆ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ವಿಟಮಿನ್ ಬಿ 6, ವಿಟಮಿನ್ ಇ ಮತ್ತು ಫೋಲೇಟ್‌ನಂತಹ ಅಂಶಗಳು ನಿಂಬೆಯಲ್ಲಿ ಕಂಡು ಬರುತ್ತವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ.

ಹೊಟ್ಟೆ ಶುಚಿಯಾಗುತ್ತದೆ

ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ನಿತ್ಯ ಮುಂಜಾನೆ ಸೇವಿಸಿದರೆ ದೇಹದಲ್ಲಿ ಸೇರಿರುವ ವಿಷಕಾರಿ ಅಂಶಗಳು ಸುಲಭವಾಗಿ ಹೊರ ಹೋಗುತ್ತವೆ.

ಉತ್ತಮ ಜೀರ್ಣಕ್ರಿಯೆಗಾಗಿ

ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆಯನ್ನು ಶುಚಿಗೊಳಿಸಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿ

ಬೆಳಿಗ್ಗೆ ನಿಂಬೆ ರಸ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ತ್ವಚೆ ಹೊಳೆಯುತ್ತದೆ

ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ನಿತ್ಯ ಮುಂಜಾನೆ ಸೇವಿಸುವುದರಿಂದ ತ್ವಚೆ ಒಳಗಿನಿಂದಲೇ ಕಾಂತಿಯುಕ್ತವಾಗುತ್ತದೆ.

ತೂಕ ನಿಯಂತ್ರಣ

ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ನಿತ್ಯ ಮುಂಜಾನೆ ಸೇವಿಸಿ ತೂಕ ನಿಯಂತ್ರಣದಲ್ಲಿ ಇರುತ್ತದೆ.

ರಕ್ತದೊತ್ತಡದಿಂದ ಮುಕ್ತಿ

ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ನಿತ್ಯ ಮುಂಜಾನೆ ಸೇವಿಸಿ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ಡಿ ಹೈಡ್ರೇಟ್ ಆಗುವುದಿಲ್ಲ

ಇದು ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.


ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story