ಈರುಳ್ಳಿ ರಸಕ್ಕೆ ಈ ಎಣ್ಣೆ ಬೆರೆಸಿ ಹಚ್ಚಿ: ಕೂದಲು ಉದುರುವ ಜಾಗದಲ್ಲೇ ಹೊಸ ಕೂದಲು ದಷ್ಟಪುಷ್ಟವಾಗಿ ಬೆಳೆಯುತ್ತೆ

ನೈಸರ್ಗಿಕ ಮನೆಮದ್ದು

ಪ್ರತಿಯೊಬ್ಬರೂ ದಪ್ಪ ಮತ್ತು ಸುಂದರವಾದ ಕೂದಲು ಬೇಕೆಂದು ಇಷ್ಟಪಡುತ್ತಾರೆ. ಇದೇ ಕಾರಣದಿಂದ ಅನೇಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಕೆಲವು ನೈಸರ್ಗಿಕ ಮನೆಮದ್ದುಗಳಿಂದ ಕೂದಲನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಮಾಡಬಹುದು.

ಮೊಟ್ಟೆ

ಮೊಟ್ಟೆ ಖನಿಜಗಳಿಂದ ಸಮೃದ್ಧವಾಗಿವೆ. ಇದು ಪ್ರೋಟೀನ್‌ʼಗಳನ್ನು ಒಳಗೊಂಡಿರುತ್ತದೆ. ವಿಶೇಷವಾಗಿ ಬಯೋಟಿನ್‌ʼಗಳು ಮತ್ತು ವಿಟಮಿನ್‌ʼಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಕೂದಲಿನ ಎಲ್ಲಾ ಭಾಗಗಳಿಗೆ ಹಚ್ಚಿ. 20 ನಿಮಿಷಗಳ ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಇದು ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ ಜೊತೆಗೆ ದಪ್ಪವಾಗಿಸುತ್ತದೆ.

ಹರಳೆಣ್ಣೆ

ಹರಳೆಣ್ಣೆ ಎಲ್ಲಾ ಮನೆಗಳಲ್ಲೂ ಇರುತ್ತದೆ. ಯಾವುದೇ ರಾಸಾಯನಿಕಗಳನ್ನು ಬಳಸದೆ ಕೂದಲನ್ನು ದಪ್ಪ ಮತ್ತು ನೇರವಾಗಿಸಲು ಇದು ಸಾಕಷ್ಟು ಸಹಾಯ ಮಾಡುತ್ತದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ ಕೂದಲಿಗೆ ಜೀವ ನೀಡುತ್ತದೆ.ಇದರಲ್ಲಿ ಕೊಬ್ಬಿನಾಮ್ಲಗಳಿದ್ದು, ಹಾನಿಯಿಂದ ತಡೆಯುತ್ತದೆ. ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಕೂದಲಿಬ ಬೇರುಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಹೀಗಾಗಿ ಕೂದಲು ದಟ್ಟವಾಗಿ ಬೆಳೆಯುತ್ತದೆ.

ಗ್ರೀನ್ ಟೀ

ಗ್ರೀನ್ ಟೀ ಆಂಟಿ-ಆಕ್ಸಿಡೆಂಟ್‌ʼಗಳನ್ನು ಹೊಂದಿದ್ದು, ಕೂದಲನ್ನು ದಪ್ಪ ಮತ್ತು ಸುಂದರವಾಗಿಸಲು ಸಹಾಯ ಮಾಡುತ್ತದೆ. ಇದು ನೆತ್ತಿಯನ್ನು ಹಾನಿಯಿಂದ ರಕ್ಷಿಸುವ ಜೊತೆಗೆ ಕೂದಲಿನ ಕಿರುಚೀಲಗಳ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ಈರುಳ್ಳಿ ಜ್ಯೂಸ್

ಈರುಳ್ಳಿಯನ್ನು ಬಳಸಿ ಜ್ಯೂಸ್ ತಯಾರಿಸಿ ಅದನ್ನು ಕೂದಲಿಗೆ ಹಚ್ಚುವುದರಿಂದ ಸಲ್ಫರ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದಕ್ಕೆ ತೆಂಗಿನೆಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಮತ್ತೆ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

ಸೂಚನೆ

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ

VIEW ALL

Read Next Story