ಜಿಡ್ಡುಗಟ್ಟಿದ ಕೊಬ್ಬನ್ನೂ ಬೆಣ್ಣೆಯಂತೆ ಕರಗಿಸುವ 'ಲೋ ಕ್ಯಾಲೋರಿ ಡ್ರಿಂಕ್ಸ್'! ಒಮ್ಮೆ ಟ್ರೈ ಮಾಡಿ...!

Yashaswini V
Nov 18,2024

ತೂಕ ಇಳಿಕೆ

ಜಿಡ್ಡುಗಟ್ಟಿದ ಕೊಬ್ಬು ಕರಗಿಸಿ ಹೊಟ್ಟೆಯನ್ನು ಸುಲಭವಾಗಿ ಚಪ್ಪಟೆಯಾಗಿಸಲು ಕೆಲವು ಕಡಿಮೆ ಕ್ಯಾಲೋರಿಯ ಪಾನೀಯಗಳು ಸಹಾಯಕವಾಗಿವೆ.

ಎಳನೀರು

ಲೋ ಕ್ಯಾಲೋರಿ ಪಾನೀಯವಾದ ಎಳನೀರಿನಲ್ಲಿ ಜೀವಸತ್ವಗಳು, ಖನಿಜಗಳು, ಅಮೈನೋ ಆಮ್ಲಗಳ ಜೊತೆಗೆ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಕೂಡಾ ಇದ್ದು ಇದು ತೂಕ ಇಳಿಕೆಯನ್ನು ಪ್ರಚೋದಿಸುತ್ತದೆ.

ಲೆಮನ್ ವಾಟರ್

ವಿಟಮಿನ್ ಸಿ ಸಮೃದ್ಧ ನಿಂಬೆ ರಸವನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತಿನ್ನುವ ಕಡುಬಯಕೆ ಕಡಿಮೆಯಾಗಿ ಬೊಜ್ಜು ಕರಗಲು ಸಹಕಾರಿ ಆಗುತ್ತದೆ.

ಚಿಯಾ ವಾಟರ್

ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ ಅರ್ಧ ಚಮಚದಷ್ಟು ಚಿಯಾ ಬೀಜಗಳನ್ನು ನೆನೆಹಾಕಿ ಬೆಳಿಗ್ಗೆ ಎದ್ದ ಕೂಡಲೇ ಈ ಪಾಣೀಯವನ್ನು ಕುಡಿದರೆ ಬೆಲ್ಲಿ ಫ್ಯಾಟ್ ಸಲೀಸಾಗಿ ಕರಗುತ್ತೆ.

ಸೌತೆಕಾಯಿ ನೀರು

ಕುಡಿಯುವ ನೀರಿನಲ್ಲಿ ಸಣ್ಣ ಸ್ಲೈಸ್ ಮಾಡಿದ ಸೌತೆಕಾಯಿ, ಒಂದೆರಡು ಪುದೀನ ಸೊಪ್ಪನ್ನು ಹಾಕಿಟ್ಟು ದಿನವಿಡೀ ಕುಡಿಯಿರಿ. ಜೀವಸತ್ವಗಳು ಹಾಗೂ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಈ ನೀರು ತೂಕ ಇಳಿಕೆಗೆ ಸಹಕಾರಿ ಆಗಿದೆ.

ವೆಜ್ ಜ್ಯೂಸ್‌

ಟೋಮ್ಯಾಟೊ, ಸೌತೆಕಾಯಿ, ಕೋಸು ಸೇರಿದಂತೆ ತೂಕ ಇಳಿಕೆಗೆ ಪ್ರಚೋದನೆ ನೀಡುವ ತರಕಾರಿ ಜ್ಯೂಸ್‌ಗಳ ಸೇವನೆಯೂ ತೂಕ ಇಳಿಕೆಗೆ ಸಹಕಾರಿ ಆಗಿದೆ.

ಗ್ರೀನ್ ಟೀ

ಉತ್ಕರ್ಷಣ ನಿರೋದಕಗಳಲ್ಲಿ ಹೇರಳವಾಗಿರುವ ಗ್ರೀನ್ ಟೀ ಸಹ ತೂಕ ಇಳಿಕೆಗೆ ಸಹಾಯಕವಾಗಿದೆ.

ಬ್ಲಾಕ್ ಕಾಫಿ

ನಿತ್ಯ ಒಂದು ಗ್ಲಾಸ್ ಬ್ಲಾಕ್ ಕಾಫಿ ಕುಡಿಯುವುದರಿಂದ ಸಹ ತೂಕ ಇಳಿಕೆಯನ್ನು ಸುಲಭವಾಗಿ ನಿರ್ವಹಿಸಬಹುದು.

ಸೂಚನೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story