ಗರ್ಭಾವಸ್ಥೆಯಲ್ಲಿ ಮಹಿಳೆ ತನ್ನನ್ನು ತಾನು ಜಾಗರೂಕಳಾಗಿ ನೋಡಿಕೊಳ್ಳುವುದಲ್ಲದೆ ತನ್ನಲ್ಲಿರುವ ಜೀವವನ್ನು ನೋಡಿಕೊಳ್ಳಬೇಕು.

ಹೀಗಾಗಿ ಗರ್ಭಿಣಿಯರು ಗರ್ಭಾವಸ್ಥೆಯಲ್ಲಿರುವಾಗ ಎಚ್ಚರಿಕೆ ಮತ್ತು ತಾಳ್ಮೆಯಿಂದ ತನ್ನನ್ನು ತಾನು ಗಮನಹರಿಸುವುದು ಮುಖ್ಯ.

ಇದರ ಜೊತೆಗೆ ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸುವುದು, ಉತ್ತಮ.

ಇದರಲ್ಲಿ ಒಂದು ಮುಖ್ಯ ಅಂಶ ಎಂದರೆ ಗರ್ಭಾವಸ್ಥೆಯಲ್ಲಿ ಗರ್ಭಿಣಿ ಕಾಫಿಯನ್ನು ಕುಡಿಯಬಾರದು ಎನ್ನುವುದು ಪ್ರಶ್ನೆಯಾಗಿದೆ

ಹೌದು ಗರ್ಭಾವಸ್ಥೆಯಲ್ಲಿ ಗರ್ಭಿಣಿ ಕಾಫಿ ಕುಡಿಯುವುದು ಒಳ್ಳೆಯದಲ್ಲ. ಕಾರಣ ಇದು ಭ್ರೂಣಕ್ಕೆ ರಕ್ತ ಪೂರೈಕೆ ಕಡಿಮೆ ಮಾಡುತ್ತದೆ ಮತ್ತು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಆದರೆ ವೈದ್ಯರು ಹೇಳುವ ಪ್ರಕಾರ ಮಧ್ಯಮ ಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಯಾವುದೇ ತೊಂದರೆ ಇಲ್ಲ.

ದಿನಕ್ಕೆ 200 ಮಿಗ್ರಾಂಗಿಂತ ಹೆಚ್ಚು ಕಾಫಿಯನ್ನು ಸೇವಿಸಬಾರದು ಮತ್ತು ಮಗುವಿಗೆ ಜನ್ಮ ನೀಡಿದ ನಂತರವೂ ಕಾಫಿ ಕುಡಿಯುವುದು ಕಡಿಮೆ ಮಾಡಬೇಕು.

ಆದರೆ ಇದರ ಬದಲಿಗೆ ಚಹಾ, ಬಿಸಿ ನೀರು, ಮೂಲಿಕಾ ಚಹಾ, ಹಳದಿ ಮಿಶ್ರಿತ ಹಾಲು, ಪುದೀನ ಮತ್ತು ನಿಂಬೆ ಚಹಾ ಕುಡಿಯಬಹುದು

VIEW ALL

Read Next Story