Chanakya niti: ಚಾಣಕ್ಯರು ಜೀವನದ ಕುರಿತು ಹಲವು ಪ್ರಮುಖ ವಿಷಯಗಳನ್ನು ತಮ್ಮ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚಾಣಕ್ಯರ ಪುಸ್ತಕದಲ್ಲಿ ಜೀವನದ ಹಲವಾರು ವಿಷಯಗಳ ಕುರಿತು ಉಲ್ಲೇಖಿಸಲಾಗಿದೆ. ಈ ವಿಷಯಗಳು ಯುವ ಪೀಳಿಗೆಗೆ ಮಾರ್ಗದರ್ಶನವನ್ನು ನೀಡುತ್ತದೆ.
ಚಾಣಕ್ಯ ನೀತಿಯ ಪ್ರಕಾರ ಅವರ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿರುವ ಈ 5 ನೀತಿಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಯಶಸ್ಸು ಪಡೆಯಬಹುದು ಎನ್ನುತ್ತಾರೆ ಚಾಣಕ್ಯರು.
ಆಚಾರ್ಯ ಚಾಣಕ್ಯರ ಪ್ರಕಾರ ಮನುಷ್ಯನ ಅತೀ ದೊಡ್ಡ ಶತ್ರು ಎಂದರೆ, ಅದುರ ಸೋಮಾರಿತನ, ಮುನುಷ್ಯ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಸೋಮಾರಿತನವನ್ನು ಬಿಟ್ಟುಬಿಡಬೇಕು ಎನ್ನುತ್ತಾರೆ ಚಾಣಕ್ಯರು.
ನೀತಿ ಶಾಸತ್ರದಲ್ಲಿ ಹೇಳಿರುವ ಪ್ರಕಾರ, ಎಷ್ಟೆ ಯಶಸ್ಸು ಗಳಿಸಿದರೂ ಕೂ, ಮನುಷ್ಯನಿಗೆ ಅಹಂಕಾರ ಇದ್ದರೆ, ಮನುಷ್ಯನು ಎಷ್ಟೆ ಹಣ ಸಂಪಾದಿಸಿದಿದರೂ, ದೊಡ್ಡ ಸ್ಥಾನ ತಲುಪಲು ಸಾಧ್ಯವಿಲ್ಲ.
ಯಶಸ್ವಯಾಗಲು ನಕಾರಾತ್ಮಕತೆಯನ್ನು ತ್ಯಜಿಸುವುದು ಅವಶ್ಯಕ. ಒಬ್ಬ ವ್ಯಕ್ತಿ ಯಾವಾಗಲು ಸಕಾರಾತ್ಮಕವಾಗಿ ಯೋಚನೆ ಮಾಡಬೇಕು ಎನ್ನುತ್ತೆ ನೀತಿ ಶಾಸ್ತ್ರಿ.
ನೀತಿ ಶಾಸ್ತ್ರದಲ್ಲಿ ಉಲ್ಲೇಕಿಸಲಾಗಿರುವಂತೆ, ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೇ ರೀತಿಯ ಭಯ ಇಟ್ಟುಕೊಳ್ಳಬಾರದು. ಏಕೆಂದರೆ ಭಯ ವೈಫಲ್ಯಕ್ಕೆ ಎಡೆ ಮಾಡಿ ಕೊಡುತ್ತದೆ.
ಒಬ್ಬ ವ್ಯಕ್ತಿಯೂ ಯಾವಾಗಲೂ ಆಸಕ್ತಿಯಿಂದ ಕೆಲಸ ಮಾಡಬೇಕು, ಇತರರು ಏನು ಎಂದುಕೊಳ್ಳುತ್ತಾರೆ ಎಂದು ಯೋಚಿಸಬಾರದು ಎನ್ನುತ್ತೆ ಚಾಣಕ್ಯರ ನೀತಿ ಶಾಸ್ತ್ರ.