ಮನೆ ಸುತ್ತಮುತ್ತ ತಪ್ಪಿಯೂ ಈ ಹೂವಿನ ಗಿಡವನ್ನು ನೆಡಬೇಡಿ... ಹಿಂಡು ಹಿಂಡಾಗೇ ಹಾವುಗಳು ಬರುತ್ತವೆ!

Bhavishya Shetty
Oct 02,2024

ಭಯ

ಹಾವುಗಳೆಂದರೆ ಯಾರಿಗೆ ತಾನೇ ಭಯವಿಲ್ಲ ಹೇಳಿ? ಎಲ್ಲೆ ನೋಡಿದರೂ ಅಷ್ಟೇ ಹಾವುಗಳನ್ನು ಕಂಡರೆ ಅನೇಕರು ಹೌಹಾರುತ್ತಾರೆ. ಇನ್ನು ಮನೆಯಂಗಳದಲ್ಲಿ ಬೆಳೆಯುವ ಕೆಲ ಗಿಡಗಳು ಹಾವುಗಳನ್ನು ಆಕರ್ಷಿಸುತ್ತವೆ.

ಆಕರ್ಷಿಸುವ ಸಸ್ಯ

ಈ ಸಸ್ಯಗಳನ್ನು ಮನೆ ಮುಂದೆ ಬೆಳೆಸಿದರೆ ಖಂಡಿತವಾಗಿಯೂ ಹಾವುಗಳನ್ನು ಆಕರ್ಷಿಸುತ್ತವೆ. ಅಂತಹ ಗಿಡಗಳು ಯಾವುವು ಎಂಬುದನ್ನು ತಿಳಿಯೋಣ.

ಮಲ್ಲಿಗೆ ಸಸ್ಯ

ಇಂಡಿಯಾ ಟುಡೇ ವರದಿ ಪ್ರಕಾರ, ಮಲ್ಲಿಗೆ ಸಸ್ಯಗಳ ಬಳಿ ಹಾವುಗಳು ವಾಸಿಸುವ ಹೆಚ್ಚಿನ ಸಾಧ್ಯತೆಯಿದೆ. ಏಕೆಂದರೆ ಈ ಸಸ್ಯವು ತುಂಬಾ ದಟ್ಟವಾಗಿ ಬೆಳೆಯುವುದು ಮಾತ್ರವಲ್ಲದೆ, ಗಾಢ ಪರಿಮಳವನ್ನು ಬೀರುತ್ತದೆ.

ಸೈಪ್ರೆಸ್ ಮರ

ಮನೆಯ ಸಮೀಪ ಅಂಗಳವನ್ನು ಹೊಂದಿರುವ ಜನರು, ಸೈಪ್ರೆಸ್ ಮರಗಳನ್ನು ನೆಡುತ್ತಾರೆ. ಇದು ಅಲಂಕಾರಿಕ ಸಸ್ಯವಾಗಿದ್ದು ತುಂಬಾ ಸುಂದರವಾಗಿ ಕಾಣುತ್ತದೆ, ಆದರೆ ಇದು ಸಾಕಷ್ಟು ದಟ್ಟವಾಗಿ ಬೆಳೆಯುವ ಕಾರಣದಿಂದಲೇ ಇದರಲ್ಲಿ ಹಾವುಗಳು ಬಂದು ನೆಲೆಸಲು ಪ್ರಾರಂಭಿಸುತ್ತವೆ.

ಕ್ಲೋವರ್ ಸಸ್ಯ

ಕ್ಲೋವರ್ ಸಸ್ಯಗಳು ಸಹ ಅಲಂಕಾರಿಕ ಸಸ್ಯಗಳಾಗಿವೆ. ಇದರ ಎಲೆಗಳು ದಪ್ಪ ಮತ್ತು ದಟ್ಟವಾಗಿರುತ್ತವೆ. ಭೂಮಿಯನ್ನು ಸಂಪೂರ್ಣವಾಗಿ ಆವರಿಸುವ ಈ ಸಸ್ಯಗಳಲ್ಲಿ ಹಾವುಗಳು ಅವಿತುಕೊಳ್ಳುತ್ತವೆ. ಇದೇ ಕಾರಣದಿಂದ ತಪ್ಪಾಗಿಯೂ ಮನೆಯಲ್ಲಿ ಈ ಗಿಡವನ್ನು ನೆಡಬೇಡಿ ಎನ್ನುವುದು

ನಿಂಬೆ ಗಿಡ

ನಿಂಬೆ ಗಿಡ ಅಥವಾ ಯಾವುದೇ ಸಿಟ್ರಸ್ ಮರಗಳಲ್ಲಿ ಇಲಿಗಳು ಮತ್ತು ಸಣ್ಣ ಪಕ್ಷಿಗಳಿಗೆ ನೆಲೆಸಿರುತ್ತವೆ. ಏಕೆಂದರೆ ಸಣ್ಣ ಕೀಟಗಳು ಮತ್ತು ಪಕ್ಷಿಗಳು ಹಣ್ಣುಗಳನ್ನು ತಿನ್ನಲು ಬರುತ್ತವೆ. ಈ ಕಾರಣದಿಂದಲೇ ನಿಂಬೆ ಗಿಡದ ಸುತ್ತಲೂ ಹಾವುಗಳು ಸುಳಿದಾಡುತ್ತಿರುತ್ತವೆ.

ದೇವದಾರು ಮರ

ದೇವದಾರು ಮರಗಳು ಅತಿ ಎತ್ತರದ ಸ್ಥಳಗಳಲ್ಲಿ ಬೆಳೆದರೂ, ಅವು ಬಯಲು ಸೀಮೆಯಲ್ಲೂ ಕೆಲವು ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಅದಕ್ಕಾಗಿಯೇ ಕೆಲವರು ತಮ್ಮ ಗಾರ್ಡನ್‌ಗಳಲ್ಲಿ ದೇವದಾರು ಮರಗಳನ್ನು ನೆಡುತ್ತಾರೆ. ಶ್ರೀಗಂಧದ ಮರದಂತೆ, ಹಾವುಗಳು ದೇವದಾರು ಮರದಲ್ಲಿ ಸುತ್ತುವುದನ್ನು ಆನಂದಿಸುತ್ತದೆ. ಆದ್ದರಿಂದ ಮನೆಯ ಹತ್ತಿರ ದೇವದಾರು ಮರವನ್ನು ನೆಡಬೇಡಿ.

VIEW ALL

Read Next Story