ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಹಲವಾರು ಮಹತ್ವವಾದ ವಿಚಾರಗಳ ಕುರಿತು ಬರೆದಿದ್ದಾರೆ. ಇವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಜೀವನ ಸುಖಮಯವಾಗಿ ಇರುತ್ತದೆ.
ಆಚಾರ್ಯ ಚಾಣಕ್ಯರ ಪ್ರಕಾರ ಪುರುಷನಲ್ಲಿ ಇರುವ ಕೆಲವು ಗುಣಗಳು ಮಹಿಳೆಯರಿಗೆ ಬೇಗನೆ ಇಷ್ಟವಾಗುತ್ತದೆ.
ಈ ನಾಲ್ಕು ಗುಣಗಳು ಮಹಿಳೆಯರಿಗೆ ಅತ್ಯಂತ ದೊಡ್ಡ ಆಕರ್ಷಣೆ ಎಂದೇ ಹೇಳುತ್ತಾರೆ ಆಚಾರ್ಯ ಚಾಣಕ್ಯರು.
ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರು ಪ್ರಾಮಾಣಿಕವಾಗಿ ಶ್ರಮ ಪಡುವ ಹುಡುಗನನ್ನು ಇಷ್ಟ ಪಡುತ್ತಾರೆ.
ಸ್ಪಷ್ಟವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ಹುಡುಗನ ಕಡೆಗೆ ಮಹಿಳೆಯರು ಬೇಗ ಆಕರ್ಷಿತರಾಗುತ್ತಾರೆ.
ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರು ತಮ್ಮ ಮಾತುಗಳನ್ನು ಕೇಳುವ ಹಾಗು ಗೌರವಿಸುವ ಹುಡುಗನ ಕಡೆಗೆ ಆಕರ್ಷಿತರಾಗುತ್ತಾರೆ.
ಚಾಣಕ್ಯರ ಪ್ರಕಾರ ಮಹಿಳೆಯರು ಪ್ರೀತಿಯಲ್ಲಿ ಪ್ರಾಮಣಿಕವಾಗಿರುವ ವ್ಯಕ್ತಿಯನ್ನು ಪ್ರೀತಿಸುತ್ತಾರೆ.
ಸಾಮಾನ್ಯವಾಗಿ ಪುರುಷರು ಹೇಗೆ ವರ್ತಿಸುತ್ತಾರೆ ಎಂಬುದರ ಮೇಲೆ ಮಹಿಳೆಯರಿಗೆ ಒಂದು ಕಣ್ಣು ಇರುತ್ತದೆ. ಇದರಿಂದ ಅವರು ನಿಮ್ಮ ನಡತೆಗೂ ಕೂಡ ಆಕರ್ಷಿತರಾಗುತ್ತಾರೆ.